ಪ್ರತಿಯೊಬ್ಬರೂ ಉತ್ಸವದ ಭಾಗವಾಗಲಿ

 ಕಿರಿಮಂಜೇಶ್ವರದಲ್ಲಿ ನಡೆದ ಗ್ರಾಮೋತ್ಸವವನ್ನು ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಉದ್ಘಾಟಿಸಿದರು. ನೋಡಲ್ ಅಧಿಕಾರಿ ರಮೇಶ ಕುಲಾಲ್, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಗಾಣಿಗ, ಉಪಾಧ್ಯಕ್ಷೆ ಅನಿತಾ ಆರ್.ಕೆ., ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಇತರರು ಇದ್ದರು.
ಕಿರಿಮಂಜೇಶ್ವರದಲ್ಲಿ ನಡೆದ ಗ್ರಾಮೋತ್ಸವವನ್ನು ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಉದ್ಘಾಟಿಸಿದರು. ನೋಡಲ್ ಅಧಿಕಾರಿ ರಮೇಶ ಕುಲಾಲ್, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಗಾಣಿಗ, ಉಪಾಧ್ಯಕ್ಷೆ ಅನಿತಾ ಆರ್.ಕೆ., ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಇತರರು ಇದ್ದರು.
Published on
ಬೈಂದೂರು: ಶಾಸಕ ಗುರುರಾಜ್ ಗಂಟಿಹೊಳೆ ಕ್ಷೇತ್ರದ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಬೈಂದೂರು ಉತ್ಸವಕ್ಕೆ ಪೂರ್ವಭಾವಿಯಾಗಿ ಪ್ರತೀ ಗ್ರಾಮಗಳಲ್ಲಿ ಗ್ರಾಮೋತ್ಸವ ಆಯೋಜಿಸಿದ್ದಾರೆ. ಈ ಮೂಲಕ ಗ್ರಾಮದ ಭೌತಿಕ ಬೆಳವಣಿಗೆ ಜತೆಗೆ ಸಂಜೀವಿನಿ ಸಂಘಗಳನ್ನು ಬಲಪಡಿಸುವ ಉದ್ದೇಶವಿದೆ. ಕ್ಷೇತ್ರದ ಪ್ರತಿಯೊಬ್ಬರೂ ಉತ್ಸವದ ಭಾಗವಾಗಬೇಕು ಎಂದು ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಹೇಳಿದರು.
ಕಿರಿಮಂಜೇಶ್ವರ ಗ್ರಾಪಂ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಹಾಗೂ ಬ್ಯಾಂಕಿಂಗ್ ಇಲಾಖೆಯ ಸಹಭಾಗಿತ್ವದಲ್ಲಿ ಸೋಮವಾರ ನಡೆದ ಕಿರಿಮಂಜೇಶ್ವರ ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಸಾಧಕರು ಮತ್ತು ಆರು ಅಂಗವಿಕರಲನ್ನು ಸನ್ಮಾನಿಸಲಾಯಿತು. ಪುರುಷ ಹಾಗೂ ಮಹಿಳೆಯರಿಗಾಗಿ ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೋಡಲ್ ಅಧಿಕಾರಿ ರಮೇಶ ಕುಲಾಲ್, ಬೈಂದೂರು ಉತ್ಸವ ಸಂಚಾಲಕ ಶ್ರೀಗಣೇಶ ಗಾಣಿಗ, ಉಪಾಧ್ಯಕ್ಷೆ ಅನಿತಾ ಆರ್.ಕೆ., ತಾಪಂ ಮಾಜಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಶ್ಯಾಮಲಾ ಕುಂದರ್, ತಾಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ, ಲಯನ್ಸ್ ಕ್ಲಬ್ ಅಧ್ಯಕ್ಷ ನಿತ್ಯಾನಂದ ಆಚಾರ್ಯ ಹಾಗೂ ಗ್ರಾಪಂ ಸದಸ್ಯರು ಇದ್ದರು. ಪಿಡಿಒ ರಾಜೇಶ್ ಸ್ವಾಗತಿಸಿ, ಗ್ರಾಪಂ ಸದಸ್ಯ ಈಶ್ವರ ದೇವಾಡಿಗ ವಂದಿಸಿದರು. ದೀಪಕ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net