ಸ್ವಚ್ಛತಾ ಪಕ್ವಾಡದ ಅಂಗವಾಗಿ ಸುರತ್ಕಲ್‌ನಲ್ಲಿ ಸ್ವಚ್ಛತಾ ಜಾಥಾ ಮತ್ತು ಬೀದಿ ನಾಟಕ ಕಾರ್ಯಕ್ರಮ ನಡೆಯಿತು. ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ ಕಾಲೆ, ಕೇಶವ ಪಾಟಾಳಿ, ಕಾಲೇಜು ಪ್ರಾಂಶುಪಾಲೆ ಲಕ್ಷ್ಮೀ ಮೊದಲಾದವರಿದ್ದರು.
ಸ್ವಚ್ಛತೆ ನಮ್ಮಿಂದಲೇ ಪ್ರಾರಂಭವಾಗಬೇಕು. ಈ ಮೂಲಕ ಗ್ರಾಮ, ರಾಜ್ಯ, ದೇಶ ಸ್ವಚ್ಛವಾಗಿರಲು ಸಾಧ್ಯ ಎಂದು ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ.ಕಾಲೆ ಹೇಳಿದರು.
ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎಂ.ಆರ್.ಪಿ.ಎಲ್ ವತಿಯಿಂದ 15 ದಿನಗಳ ಕಾಲ ನಡೆಯುವ ಸ್ವಚ್ಛತಾ ಪಕ್ವಾಡದ ಅಂಗವಾಗಿ ಸುರತ್ಕಲ್‌ನಲ್ಲಿ ಸ್ವಚ್ಛತಾ ಜಾಥಾ ಮತ್ತು ಬೀದಿ ನಾಟಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಸುರತ್ಕಲ್ ಜಂಕ್ಷನ್‌ವರೆಗೆ ಸ್ವಚ್ಛತಾ ಜಾಥಾ ನಂತರ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕ ಹಮ್ಮಿಕೊಂಡರು.
ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಅಧಿಕಾರಿ ಕೇಶವ ಪಾಟಾಳಿ, ಕಾಲೇಜು ಪ್ರಾಂಶುಪಾಲೆ ಲಕ್ಷ್ಮೀ, ಸುರತ್ಕಲ್ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಜ್‌ಮೋಹನ್ ರಾವ್, ಕಾರ್ಯದರ್ಶಿ ಸತೀಶ್ ಸದಾನಂದ, ಕಾಲೇಜು ವಿದ್ಯಾರ್ಥಿ ಸೇವಾ ಪಾಲಕ ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.