ಮಕ್ಕಳು ಅರಿಯಲಿ ದೇಶದ ಇತಿಹಾಸ

 ಸಚಿವ ಯು.ಟಿ.ಖಾದರ್ ಧ್ವಜಾರೋಹಣಗೈದು ಬಲೂನ್ ಹಾರಿಸಿದರು. ಪೌರಾಯುಕ್ತ ಸಂತೋಷ್ ಎಸ್.ಡಿ., ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಗರಸಭೆಯ ಕಂದಾಯಾಧಿಕಾರಿ ನವೀನ್ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು.
ಸಚಿವ ಯು.ಟಿ.ಖಾದರ್ ಧ್ವಜಾರೋಹಣಗೈದು ಬಲೂನ್ ಹಾರಿಸಿದರು. ಪೌರಾಯುಕ್ತ ಸಂತೋಷ್ ಎಸ್.ಡಿ., ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಗರಸಭೆಯ ಕಂದಾಯಾಧಿಕಾರಿ ನವೀನ್ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ


ನಾವಿಂದು ನೆಮ್ಮದಿಯಿಂದ ಇರಲು ದೇಶ ಕಾಯುವ ಸೈನಿಕರು ಕಾರಣ. ಅವರ ಶ್ರಮ, ತ್ಯಾಗವನ್ನು ಸ್ಮರಿಸುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ದೇಶದ ಇತಿಹಾಸ ಅರಿತು, ಇತಿಹಾಸ ನಿರ್ಮಾಣ ಮಾಡಬೇಕಿದೆ. ಶಿಕ್ಷಣದ ಜತೆ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟಿನಲ್ಲಿ ತಾಲೂಕು ಮಟ್ಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಮೇಲ್ಸೇತುವೆವರೆಗೆ ವಿವಿಧ ಶಾಲಾ ವಿದ್ಯಾರ್ಥಿಗಳು, ಸ್ಕೌಟ್ಸ್‌ಗೈಡ್ಸ್, ಕಬ್‌ಬುಲ್‌ಬುಲ್ ತಂಡಗಳು, ನಸಿರ್ಂಗ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬ್ಯಾಂಡ್, ವಾದ್ಯ ಮತ್ತು ನಾಸಿಕ್ ಬ್ಯಾಂಡ್‌ಗಳೊಂದಿಗೆ ಪಥಸಂಚಲನದಲ್ಲಿ ಭಾಗವಹಿಸಿದರು. ಕೆಎಸ್‌ಆರ್‌ಪಿ 7ನೇ ಪಡೆಯ ಬ್ಯಾಂಡ್ ಸೆಟ್ ತಂಡವೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿತು.
ಅಬ್ಬಕ್ಕ ವೃತ್ತದಲ್ಲಿ ಉಳ್ಳಾಲ ತಹಸೀಲ್ದಾರ್ ಪ್ರಶಾಂತ್ ಪಾಟೇಲ್ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಉಳ್ಳಾಲ ಪೌರಾಯುಕ್ತ ಸಂತೋಷ್ ಎಸ್.ಡಿ., ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ನಗರಸಭೆಯ ಕಂದಾಯ ಅಧಿಕಾರಿ ನವೀನ್ ಹೆಗ್ಡೆ, ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ, ತಾಲೂಕು ಪಂಚಾಯಿತಿ ಸಿಇಒ ಗುರುದತ್ ಎಂ.ಎನ್., ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್, ಕೋಟೆಕಾರ್ ಪ.ಪಂ. ಮುಖ್ಯಾಧಿಕಾರಿ ಮಾಲಿನಿ, ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ, ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಯು.ಕೆ.ಮೋನು ಮತ್ತಿತರರು ಉಪಸ್ಥಿತರಿದ್ದರು. ಕೆಎಂಕೆ ಮಂಜನಾಡಿ, ತ್ಯಾಗಂ ಹರೇಕಳ ಮತ್ತು ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net