ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೈಗೂಡಿಸಿಕೊಳ್ಳಲಿ

 ಕಡಬ ತಾಲೂಕುಮಟ್ಟದ ವಾಲಿಬಾಲ್ ಪಂದ್ಯವನ್ನು ಹರೀಶ್ ಎಸ್.ಇಂಜಾಡಿ ಉದ್ಘಾಟಿಸಿದರು. ಪ್ರಮುಖರಾದ ಸೋಮಶೇಖರ್ ನಾಯಕ್, ಗುಣವರ್ಧನ ಕೆದಿಲ, ರಾಧಾಕೃಷ್ಣ ಚಿದ್ಗಲ್ ಮತ್ತಿತರರು ಉಪಸ್ಥಿತರಿದ್ದರು.
ಕಡಬ ತಾಲೂಕುಮಟ್ಟದ ವಾಲಿಬಾಲ್ ಪಂದ್ಯವನ್ನು ಹರೀಶ್ ಎಸ್.ಇಂಜಾಡಿ ಉದ್ಘಾಟಿಸಿದರು. ಪ್ರಮುಖರಾದ ಸೋಮಶೇಖರ್ ನಾಯಕ್, ಗುಣವರ್ಧನ ಕೆದಿಲ, ರಾಧಾಕೃಷ್ಣ ಚಿದ್ಗಲ್ ಮತ್ತಿತರರು ಉಪಸ್ಥಿತರಿದ್ದರು.
Published on
ಸುಬ್ರಹ್ಮಣ್ಯ: ಪಾಠದೊಂದಿಗೆ ಪಠ್ಯೇತರ ಚಟಿವಟಿಕೆಗಳು ವಿದ್ಯಾರ್ಥಿಗಳ ಬದುಕಿಗೆ ಪೂರಕವಾಗಿವೆ. ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿದ್ದು ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೈಗೂಡಿಸಿಕೊಳ್ಳಬೇಕು. ಇದರಿಂದ ಉನ್ನತ ಸ್ಥಾನ ಪ್ರಾಪ್ತವಾಗುತ್ತದೆ. ಶಿಸ್ತು, ಕಠಿಣ ಪರಿಶ್ರಮದಿಂದ ಗೆಲುವು ಸಾಧ್ಯ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಆಶ್ರಯದಲ್ಲಿ ಶನಿವಾರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜು ವಿಭಾಗದ ಕಡಬ ತಾಲೂಕುಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯ ಉದ್ಘಾಟಿಸಿ ಮಾತನಾಡಿದರು.
ಕುಕ್ಕೆ ದೇವಳದ ಮಾಸ್ಟರ್ ಪ್ಲಾೃನ್ ಸಮಿತಿ ಸದಸ್ಯ ಪವನ್ ಎಂ.ಡಿ., ಪ್ರಾಂಶುಪಾಲ ಸೋಮಶೇಖರ್ ನಾಯಕ್, ತಾಲೂಕು ಕ್ರೀಡಾ ಮಂಡಳಿ ಸಂಚಾಲಕ ಹ್ಯಾರಿಸ್, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುಣವರ್ಧನ ಕೆದಿಲ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್., ಕ್ರೀಡಾ ನಿರ್ದೇಶಕಿ ಸುಧಾ, ಕ್ರೀಡಾ ಕಾರ್ಯದರ್ಶಿ ಮಿಥುನ್ ಕುಮಾರ್ ಎ.ಜೆ., ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕಿ ಜಯಶ್ರೀ ವಿ.ದಂಬೆಕೋಡಿ ಸ್ವಾಗತಿಸಿದರು. ಉಪನ್ಯಾಸಕ ಜಯಪ್ರಕಾಶ್ ಆರ್. ವಂದಿಸಿದರು. ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net