

ದೇಶ ಮತ್ತು ಧರ್ಮಕ್ಕೆ ಅವಿನಾಭಾವ ಸಂಬಂಧವಿದ್ದು, ಜನರ ಸುಭಿಕ್ಷೆಗಾಗಿ ಕೃಷಿಕರು ಹಾಗೂ ದೇಶ ರಕ್ಷಣೆಗೆ ಸೈನಿಕರು ಬೇಕು. ಭೂಮಿ ಪಾವನವಾಗಬೇಕಾದರೆ ಯಾಗ ಹವನಗಳು ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಹನುಮಗಿರಿ ಯುವ ಪೀಳಿಗೆಗೆ ಪ್ರೇರಣೆ ನೀಡುವ ತಾಣವಾಗಿದೆ. ದುಷ್ಟ ಶಕ್ತಿಗಳ ದೂರ ವಾಡಲು ಹಾಗೂ ಶಿಷ್ಟರ ರಕ್ಷಣೆಗೆ ಯಜ್ಞಹವನಗಳ ಅಗತ್ಯವಿದ್ದು, ಇದರ ರಕ್ಷಣೆ ಜನರ ಕರ್ತವ್ಯವಾಗಿದೆ.