ಪಡುಬಿದ್ರಿ: ತುಳುನಾಡು ಸಾಮರಸ್ಯದ ತವರೂರು. ನಮ್ಮ ಹಿರಿಯರು ಉನ್ನತ ನೈತಿಕ ಮೌಲ್ಯ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ನಾಗ, ದೈವ, ದೇವರಲ್ಲಿ ಭಯಭಕ್ತಿ, ನಂಬಿಕೆ, ಕುಟುಂಬದಲ್ಲಿ ಸಾಮರಸ್ಯ, ಸಹಬಾಳ್ವೆಯ ಪಾಠವನ್ನು ಕಲಿಸಿದ್ದಾರೆ. ತುಳುನಾಡು ದೈವ-ದೇವರ ಗರ್ಭಗುಡಿ, ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ಉದ್ಯಮಿ ವಲದೂರು ಪಡುಮನೆ ಗಣೇಶ್ ಪೂಜಾರಿ ಹೇಳಿದರು.