ನೆಮ್ಮದಿಯಿಂದರಲಿ ಹಿರಿಯರ ಸಂಧ್ಯಾಕಾಲ

ಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾ.ಕಿರಣ್​ ಎಸ್​. ಗಂಗಣ್ಣವರ್​ ಹಾಗೂ ಡಾ. ರವೀಂದ್ರನಾಥ್​ ಶಾನುಭಾಗ್​ ಉದ್ಘಾಟಿಸಿದರು. ನ್ಯಾ. ನಿತಿನ್​ ರಾವ್​, ಅಬೀದ್​ ಗದ್ಯಾಳ್​, ಎಸ್​.ಎಸ್​. ಕಾದ್ರೋಳ್ಳಿ, ಪ್ರೇಮಮೂರ್ತಿ ಕೆ., ರತ್ನಾ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನ್ಯಾ.ಕಿರಣ್​ ಎಸ್​. ಗಂಗಣ್ಣವರ್​ ಹಾಗೂ ಡಾ. ರವೀಂದ್ರನಾಥ್​ ಶಾನುಭಾಗ್​ ಉದ್ಘಾಟಿಸಿದರು. ನ್ಯಾ. ನಿತಿನ್​ ರಾವ್​, ಅಬೀದ್​ ಗದ್ಯಾಳ್​, ಎಸ್​.ಎಸ್​. ಕಾದ್ರೋಳ್ಳಿ, ಪ್ರೇಮಮೂರ್ತಿ ಕೆ., ರತ್ನಾ ಇತರರಿದ್ದರು.
Published on

* ನ್ಯಾಯಾಧಿಶ ಕಿರಣ್​ ಎಸ್​. ಗಂಗಣ್ಣನವರ್​ ಆಶಯ

* ಹಿರಿಯ ನಾಗರಿಕರಿಗೆ ಕಾನೂನು ಕಾರ್ಯಾಗಾರ

ಉಡುಪಿ: ಆಧುನಿಕ ಜೀವನ ಶೈಲಿ, ತಂತ್ರಜ್ಞಾನದ ಬೆಳವಣಿಗೆ, ನಗರೀಕರಣ, ವಿಭಕ್ತ ಕುಟುಂಬ ಪದ್ಧತಿಯಿಂದ ಹಿರಿಯ ನಾಗರಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆ, ಕಾನೂನುಗಳ ಅರಿವಿದ್ದಾಗ ಮಾತ್ರ ಹಿರಿಯರ ಮೇಲಾಗುವ ದೌರ್ಜನ್ಯ ನಿಯಂತ್ರಣ ಸಾಧ್ಯ. ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ನಡೆಸಲು ಅವರಿಗೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣನವರ್​ ಹೇಳಿದರು.
ಉಡುಪಿಯ ಜಿಪಂ ಕಚೇರಿಯಲ್ಲಿರುವ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ತಂದೆ-ತಾಯಿ, ಹಿರಿಯ ನಾಗರಿಕರ ಪಾಲನೆ&ಪೋಷಣೆ ಮತ್ತು ಕಲ್ಯಾಣ ಅಧಿನಿಯಮ-2007ರ ಕುರಿತು ಅಧಿಕಾರಿಗಳಿಗೆ ಗುರುವಾರ (ಸೆ.10) ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೋಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯ ನಾಗರಿಕರ ವೇದಿಕೆ ಜಿಲ್ಲಾ ಹಾಗೂ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ವೃದ್ಧಾಶ್ರಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ರೆಡ್​ಕ್ರಾಸ್​ ಗೌರವ ಕಾರ್ಯದರ್ಶಿ ಗಣನಾಥ್​ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ವಿವಿಧ ವಿಷಯಗಳ ಮಾಹಿತಿ, ಸಂವಾದ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ನಿತಿನ್​ ಯಶ್ವಂತ್​ ರಾವ್​ ಅವರು ಕಾನೂನು ಅನುಷ್ಠಾನದಲ್ಲಿ ನೈತಿಕ ಮೌಲ್ಯ ಮತ್ತು ಸಾಮಾಜಿಕ ಪರಿಣಾಮ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್​ ಶಾನುಭಾಗ್​ ಅವರು ಪ್ರಕರಣಗಳ ಅಧ್ಯಯನ, ಜಿಲ್ಲೆಯಲ್ಲಿ ವರದಿಯಾದ ಪ್ರಮುಖ ಪ್ರಕರಣಗಳ ವಿಶ್ಲೇಷಣೆ ಮಂಡನೆ ಮತ್ತು ಚರ್ಚೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಅಧಿಕಾರಿ ಎಂ.ನಿರಂಜನ್​ ಭಟ್​ ಅವರು ಎಂಡಬ್ಲೂಪಿಎಸ್​ ಆ್ಯಕ್ಟ್​&2007ರ ಉದ್ದೇಶ ಹಾಗೂ ನಿರ್ವಹಣೆ, ನ್ಯಾಯ ಮಂಡಳಿಯ ಪ್ರಕ್ರಿಯೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಬಳಿಕ ನಡೆದ ಸಣವಾದದಲ್ಲಿ ಹಿರಿಯ ನಾಗರಿಕರು ತಾವು ಅನುಭವಿಸುತ್ತಿರುವ ಸಮಸ್ಯೆ ತಿಳಿಸಿ, ಪರಿಹಾರ ಕಂಡುಕೊಂಡರು.
"

ಮಕ್ಕಳನ್ನು ಪ್ರೀತಿ-ಕಾಳಜಿಯಿಂದ ಬೆಳೆಸಿ, ಜೀವನ ರೂಪಿಸಿಕೊಳ್ಳುವಲ್ಲಿ ಹಿರಿಯರು ಸಾಕಷ್ಟು ಏರಿಳಿತ ಅನುಭವಿಸಿರುತ್ತಾರೆ. ವೃದ್ಧಾಪ್ಯದಲ್ಲಿ ಅವರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಯಾವುದೇ ಕಾಯಿದೆ, ಕಾನೂನು ಅನುಷ್ಠಾನಗೊಂಡಾಗ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಹಿರಿಯ ರಕ್ಷಣಾ ಕಾಯಿದೆಗಳ ಬಗ್ಗೆ ವಿಶೇಷವಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net