ಕಾನೂನುಗಳಿಂದ ಸಾಧ್ಯ ಸಮಾಜದ ಸುಧಾರಣೆ

ಉಡುಪಿಯಲ್ಲಿ ಅಸಂಘಟಿತ ವಕಯದ ಕಾರ್ಮಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ನ್ಯಾ.ಎಂ.ಐ. ಅರುಣ್​ ಉದ್ಘಾಟಿಸಿದರು. ನ್ಯಾ.ಕಿರಣ್​ ಎಸ್​. ಗಂಗಣ್ಣವರ್​, ನ್ಯಾ.ಮನು ಪಟೇಲ್​ ಬಿ.ವೈ., ರೆನೋಲ್ಡ್​ ಪ್ರವೀಣ್​ ಕುಮಾರ್​, ಚಂದ್ರಶೇಖರ್​ ಶೆಟ್ಟಿ, ರವಿಚಂದ್ರ ಆಚಾರ್ಯ ಮಾರಾಳಿ, ರಘುನಾಥ್​ ಆಚಾರ್ಯ, ಕಮಲ್​ ಷಾ ಅಲ್ತಾಫ್​ ಅಹಮ್ಮದ್​, ಗಂಗಾಧರ್​ ಎಚ್​.ಎಂ. ಇದ್ದರು.
ಉಡುಪಿಯಲ್ಲಿ ಅಸಂಘಟಿತ ವಕಯದ ಕಾರ್ಮಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ನ್ಯಾ.ಎಂ.ಐ. ಅರುಣ್​ ಉದ್ಘಾಟಿಸಿದರು. ನ್ಯಾ.ಕಿರಣ್​ ಎಸ್​. ಗಂಗಣ್ಣವರ್​, ನ್ಯಾ.ಮನು ಪಟೇಲ್​ ಬಿ.ವೈ., ರೆನೋಲ್ಡ್​ ಪ್ರವೀಣ್​ ಕುಮಾರ್​, ಚಂದ್ರಶೇಖರ್​ ಶೆಟ್ಟಿ, ರವಿಚಂದ್ರ ಆಚಾರ್ಯ ಮಾರಾಳಿ, ರಘುನಾಥ್​ ಆಚಾರ್ಯ, ಕಮಲ್​ ಷಾ ಅಲ್ತಾಫ್​ ಅಹಮ್ಮದ್​, ಗಂಗಾಧರ್​ ಎಚ್​.ಎಂ. ಇದ್ದರು.
Published on

* ಹೈಕೋರ್ಟ್​ ನ್ಯಾಯಾಧೀಶ ಎಂ.ಐ. ಅರುಣ್​ ಅಭಿಮತ

* ಅಸಂಟಿತ ಕಾರ್ಮಿಕರಿಗೆ 'ಕಾನೂನು ಅರಿವು' ಕಾರ್ಯಕ್ರಮ

ಉಡುಪಿ: ಎಲ್ಲರಿಗೂ ಸಹ ದೇಶದಲ್ಲಿರುವ ಕಾನೂನುಗಳ ತಿಳಿವಳಿಕೆ ಬಹಳ ಅತ್ಯಗತ್ಯ. ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾರೋ ಅವರೆಲ್ಲರೂ ತಮ್ಮ ವ್ಯಾಪ್ತಿಯ ಕಾನೂನು ಅರಿತುಕೊಳ್ಳಬೇಕಿದೆ. ಎಷ್ಟೇ ಬಲವಂತ, ಹಣವಂತನಿದ್ದರೂ ಸಹ ಕಾನೂನು ಪಾಲಿಸಲೇಬೇಕು. ಬದುಕಿನ ಎಲ್ಲ ವಿಭಾಗದಲ್ಲೂ ಕಾನೂನು ಅಳವಡಿಕೆಯಾಗಿದೆ. ಕಾನೂನಿನಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂದು ಹೈಕೋರ್ಟ್​ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ. ಅರುಣ್​ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಸ್ವದೇಶ್​ ಹೆರಿಟೇಜ್​ನ ಸ್ವರ್ಗ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಹಾಗೂ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಅಸಂಘಟಿತ ಚಿನ್ನ-ಬೆಳ್ಳಿ ಆಭರಣ ತಯಾರಿಕಾ ಕಾರ್ಮಿಕರಿಗಾಗಿ ಶನಿವಾರ (ಫೆ.7) ಆಯೋಜಿಸಿದ್ದ ಕಾರ್ಮಿಕ ಕಾನೂನುಗಳು ಮತ್ತು ಯೋಜನೆಗಳ ಕುರಿತು 'ಕಾನೂನು ಅರಿವು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣವರ್​, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣ್​ ಕುಮಾರ್​, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್​ ಶೆಟ್ಟಿ, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್​ ಷಾ ಅಲ್ತಾಫ್​ ಅಹಮ್ಮದ್​ ಅವರು ಕಾರ್ಮಿಕ ಸಂಘಟನೆಗಳಿಗೆ ಇರುವ ಕಾನೂನು ಹಾಗೂ ಹಕ್ಕುಗಳ ಕುರಿತಾಗಿ ಮಾಹಿತಿ ನೀಡಿದರು.
ಸವಿತಾ ಬ್ರಹ್ಮಾವರ ಪ್ರಾರ್ಥಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮನು ಪಟೇಲ್​ ಬಿ.ವೈ. ಸ್ವಾಗತಿಸಿದರು. ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಕಾನೂನು ಸಲಹೆಗಾರ ಗಂಗಾಧರ್​ ಎಚ್​.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲೆ ಸಹನಾ ಕುಂದರ್​ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರಘುನಾಥ್​ ಆಚಾರ್ಯ ವಂದಿಸಿದರು.
ಸಭೆಯ ಆರಂಭಕ್ಕೂ ಮೊದಲು ಕಾರ್ಮಿಕ ಇಲಾಖೆಯಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್​ ಧನ್​ (ಪಿಎಂ-ಎಸ್​ವೈಎಂ) ಯೋಜನೆ ಮತ್ತು ಅಂಬೇಡ್ಕರ್​ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಣಿ ಕಾರ್ಯ ಮಾಡಲಾಯಿತು.
"

ಸಮಾಜದಲ್ಲಿ ಸಮಾನತೆ, ಯಾರಿಗೂ ಶೋಷಣೆ ಆಗದಂತೆ ತಡೆಯಲು ಅನೇಕ ಬಗೆಯ ಕಾನೂನು ರಚಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೂ ಸಹ ರಕ್ಷಣೆ ಮತ್ತು ಶೋಷಣೆಯಿಂದ ಮುಕ್ತಿ ಹೊಂದಲು ವಿವಿಧ ಕಾನೂನು ರಚಿಸಲಾಗಿದೆ. ಹಕ್ಕುಗಳನ್ನಷ್ಟೇ ಅಲ್ಲ, ಬಾಧ್ಯತೆಗಳನ್ನೂ ಅಸಂಘಟಿತ ಕಾರ್ಮಿಕರು ಅರಿತುಕೊಳ್ಳಬೇಕು. ಅದಕ್ಕೆ ಇಂತಹ ಕಾನೂನು ಕಾರ್ಯಾಗಾರ ಸಹಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net