ದೌರ್ಜನ್ಯ ನಡೆದರೆ ಹೆದರಿ ಸುಮ್ಮನಿರಬೇಡಿ

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಕೀಲೆ ಭಾನುಮತಿ ಎಂ.ಆರ್​. ನಾಯರಿ ಕಾನೂನು ಅರಿವು ಮೂಡಿಸಿದರು. ವಿನಾಯಕ ಕಿಣಿ, ರೇಷ್ಮಾ ಪ್ರಭು ಇದ್ದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಕೀಲೆ ಭಾನುಮತಿ ಎಂ.ಆರ್​. ನಾಯರಿ ಕಾನೂನು ಅರಿವು ಮೂಡಿಸಿದರು. ವಿನಾಯಕ ಕಿಣಿ, ರೇಷ್ಮಾ ಪ್ರಭು ಇದ್ದರು.
Published on

* ವಿದ್ಯಾರ್ಥಿನಿಯರಿಗೆ ವಕೀಲೆ ಭಾನುಮತಿ ನಾಯರಿ ಕರೆ

*ಇಂದ್ರಾಳಿ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಉಡುಪಿ: ಹೆಣ್ಣು ಮಕ್ಕಳ ಜೀವನ ಸುಲಭವಲ್ಲ. ಹದಿಹರೆಯದ ವಯಸ್ಸಿನಲ್ಲಿ ಕೈಗೊಂಡ ದುಡುಕಿನ ಅಥವಾ ಆತುರದ ನಿರ್ಧಾರದಿಂದ ಅದೆಷ್ಟೋ ಹೆಣ್ಣುಮಕ್ಕಳು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಯಾರಿಂದಲಾದರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಥವಾ ಅವರ ಬೆದರಿಕೆಯಿಂದ ಹೆದರಿ ಸುಮ್ಮನೆ ಇರಬೇಕಿಲ್ಲ. ಪೋಕ್ಸೋ ಕಾಯಿದೆಯಡಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ವಕೀಲೆ ಭಾನುಮತಿ ಎಂ.ಆರ್​. ನಾಯರಿ ತಿಳಿಸಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಸನಗಳಿಂದ ದೂರವಿರಿ

ಹೆಣ್ಣು ಮಕ್ಕಳಿಗೆ ದೈಹಿಕ ಕಿರುಕುಳ ನೀಡುತ್ತಿದ್ದರೆ ಅಂತಹವರ ವಿರುದ್ಧ ತನ್ನ ಪಾಲಕರಲ್ಲಿ ಅಥವಾ ಶಾಲಾ ಶಿಕ್ಷಕರಲ್ಲಿ ಧೈರ್ಯದಿಂದ ತಿಳಿಸಬೇಕು. ಇತ್ತೀಚೆಗೆ ಮೊಬೈಲ್​ನಲ್ಲಿ ಲಭ್ಯವಿರುವ ವಿವಿಧ ಗೇಮ್​ಗಳಿಗೆ ಮಕ್ಕಳು ದಾಸರಾಗುತ್ತಿದ್ದು, ಅಲ್ಲಿ ನೀಡುವ ಟಾಸ್ಕ್​ಗಳನ್ನು ಅನುಸರಿಸಿ ಭವಿಷ್ಯ ನಾಶಮಾಡಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಅಪಹರಣ ಮಾಡಿ ಅವರನ್ನು ಸೇಲ್ಸ್​ ಕೆಲಸಕ್ಕೆ ಕಳುಹಿಸುತ್ತಿರುವ ವಿದ್ಯಮಾನಗಳೂ ತಿಳಿದುಬರುತ್ತಿವೆ. ಡ್ರಗ್ಸ್​ ಮಾಫಿಯಾಗಳು ಮಕ್ಕಳನ್ನೇ ಗುರಿಯಾಗಿಸಿಕೊಳ್ಳುತ್ತಿವೆ. ಹೀಗಾಗಿ ಮಕ್ಕಳೆಲ್ಲರೂ ಅತ್ಯಂತ ಎಚ್ಚರಿಕೆಯಿಂದ ಇದ್ದು, ವ್ಯಸನಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳ ರಕ್ಷಣೆಗೆ ಇರುವ ವಿವಿಧ ಕಾನೂನು ಹಾಗೂ 'ಗುಡ್​ ಟಚ್​, ಬ್ಯಾಡ್​ ಟಚ್​' ಕುರಿತಾಗಿ ಅರಿವು ಮೂಡಿಸಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿನಾಯಕ ಕಿಣಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಷ್ಮಾ ಪ್ರಭು ಉಪಸ್ಥಿತರಿದ್ದರು. 7ನೇ ತರಗತಿಯ ವಿದ್ಯಾರ್ಥಿ ನಿಕ್ಷಿತ್​ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾನ್ಯಾ ಹಾಗೂ ಚಿಂತನಾ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net