ಮಹಿಳೆಯ ಆತ್ಮವಿಶ್ವಾಸಕ್ಕೆ ಶಿಕ್ಷಣವೇ ಶಕ್ತಿ

ಉಡುಪಿಯ ಜಿ.ಶಂಕರ್​ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ನಾಗವೇಣಿ ಮಂಚಿ ಉದ್ಘಾಟಿಸಿದರು. ಪ್ರೊ. ನಿಕೇತನಾ, ಡಾ. ರಾಜೇಂದ್ರ ಕೆ., ವಿದ್ಯಾ ಡಿ., ಡಾ. ಸಫಿಯಾ, ಡಾ. ನವೀನ್​ ಕೊಣಾಜೆ, ಮಂಜುನಾಥ್​ ಇದ್ದರು.
ಉಡುಪಿಯ ಜಿ.ಶಂಕರ್​ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ನಾಗವೇಣಿ ಮಂಚಿ ಉದ್ಘಾಟಿಸಿದರು. ಪ್ರೊ. ನಿಕೇತನಾ, ಡಾ. ರಾಜೇಂದ್ರ ಕೆ., ವಿದ್ಯಾ ಡಿ., ಡಾ. ಸಫಿಯಾ, ಡಾ. ನವೀನ್​ ಕೊಣಾಜೆ, ಮಂಜುನಾಥ್​ ಇದ್ದರು.
Published on

* ಕನ್ನಡ ಲೇಖಕಿ ನಾಗವೇಣಿ ಮಂಚಿ ಅಭಿಮತ

* ಜಿ.ಶಂಕರ್​ ಕಾಲೇಜಿನಲ್ಲಿ 'ಶಿಕ್ಷಣ-ಸಬಲೀಕರಣ' ಉಪನ್ಯಾಸ

ಉಡುಪಿ: ಶಿಕ್ಷಣವು ಅವಕಾಶಗಳ ಬಾಗಿಲು ತೆರೆಯುತ್ತದೆ. ಹೀಗಾಗಿ ಮಹಿಳೆಗೆ ತನ್ನ ಹಕ್ಕು, ಭಾದ್ಯತೆ ಅರಿತುಕೊಳ್ಳಲು ಜ್ಞಾನ, ಉದ್ಯೋಗ ಹಾಗೂ ಜಾಗೃತಿ ಹೊಂದಲು ಶಿಕ್ಷಣ ನೆರವಾಗುತ್ತದೆ. ಬೌದ್ಧಿಕ ಹಾಗೂ ಮಾನಸಿಕ ದಾಸ್ಯದಿಂದ ಹೊರಬರಬೇಕು. ಶಿಕ್ಷಣವು ಆತ್ಮವಿಶ್ವಾಸ ಮತ್ತು ಆತ್ಮಬಲ ಗಳಿಸಿಕೊಳ್ಳುವ ಶಕ್ತಿ ಎಂದು ಕನ್ನಡ ಲೇಖಕಿ ನಾಗವೇಣಿ ಮಂಚಿ ಹೇಳಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಾನವಿಕ ಸಂಘ ಶನಿವಾರ (ಆ.22) ಆಯೋಜಿಸಿದ್ದ 'ಮಹಿಳೆ, ಶಿಕ್ಷಣ ಮತ್ತು ಸಬಲೀಕರಣ' ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂಜರಿಕೆ ಬೇಡ

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ. ಬದುಕನ್ನು ಕಟ್ಟಿಕೊಳ್ಳುವ ದೃಢತೆ ನೀಡುವುದು ಶಿಕ್ಷಣದ ಉದ್ದೇಶ. ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅವುಗಳನ್ನು ಅನುಭವವಾಗಿ ಪರಿವರ್ತಿಸಿಕೊಳ್ಳಬೇಕು. ಸ್ವಯಂ ನಿಯಂತ್ರಣವೂ ಮಹಿಳಾ ಸ್ವಾವಲಂಬನೆಗೆ ಅಗತ್ಯ. ಕೌಟುಂಬಿಕ ಬದುಕಿನ ಬಗ್ಗೆ ಹಿಂಜರಿಕೆ ಬೇಡ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಕೆ., ಮನ:ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಮ್ಯಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಸಫಿಯಾ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಆಶಾ ಪರಿಚಯಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನವೀನ್​ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕ ಮಂಜುನಾಥ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net