ಉಡುಪಿ: ಉತ್ತಮ ಸಂವಹನ ಪ್ರಕ್ರಿಯೆಯು ಜವಾಬ್ದಾರಿಯುತ ಮಾತುಗಳಿಂದ ಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ$್ಯ ತಪ್ಪಾಗಿ ಅರ್ಥೈಸುವ ಸಮಾಜದ ಮಧ್ಯೆ ನಾವು ಸುಶಿಕ್ಷಿತ ವ್ಯಕ್ತಿಗಳಾಗಿ ಮಾತನಾಡಬೇಕು. ಅಲ್ಲದೆ, ಆಡಿದ ನಮ್ಮ ಮಾತುಗಳಿಗೆ ಜವಾಬ್ದಾರರಾಗಿರಬೇಕು ಎಂದು ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ಪ್ರಾಧ್ಯಾಪಕಿ ಡಾ.ಸಫಿಯಾ ತಿಳಿಸಿದರು.
ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶುಕ್ರವಾರ (ಆ.21) ಆಯೋಜಿಸಿದ್ದ "ಸಂವಹನ&ಅಭಿವ್ಯಕ್ತಿಯಿಂದ ಜವಾಬ್ದಾರಿಯೆಡೆಗೆ' ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್ ಪೈ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಂಬಿಕಾ ವಂದಿಸಿದರು. ವಿದ್ಯಾರ್ಥಿನಿ ಪ್ರಹನ್ನೇಶ್ವರಿ ಪರಿಚಯಿಸಿದರು. ಭಾವನಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.