ಸಕಲ ಶಬ್ದಗಳಿಂದಲೂ ಪ್ರತಿಪಾದಿತ ಭಗವಂತ

ಉಡುಪಿಯ ಕಾವ್ಯಶಾಸ್ತ್ರ ವಿಚಾರ ಪರಿಷತ್​ನ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಡಾ. ಶ್ರೀನಿವಾಸಮೂರ್ತಿ ಆಚಾರ್ಯ ಅವರನ್ನು ಪ್ರೊ. ಡಾ. ಡಿ.ಎಸ್​. ಅಮೃತೇಶ ಆಚಾರ್ಯ ಗೌರವಿಸಿದರು. ಡಾ. ಅಜಿತಕುಮಾರ ಆಚಾರ್ಯ ಇದ್ದರು.
ಉಡುಪಿಯ ಕಾವ್ಯಶಾಸ್ತ್ರ ವಿಚಾರ ಪರಿಷತ್​ನ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಡಾ. ಶ್ರೀನಿವಾಸಮೂರ್ತಿ ಆಚಾರ್ಯ ಅವರನ್ನು ಪ್ರೊ. ಡಾ. ಡಿ.ಎಸ್​. ಅಮೃತೇಶ ಆಚಾರ್ಯ ಗೌರವಿಸಿದರು. ಡಾ. ಅಜಿತಕುಮಾರ ಆಚಾರ್ಯ ಇದ್ದರು.
Published on

* ಡಾ. ಶ್ರೀನಿವಾಸಮೂರ್ತಿ ಆಚಾರ್ಯ ಅಭಿಪ್ರಾಯ

* ವೇದಾಂತದಲ್ಲಿ ವೃತ್ತಿ ಸ್ವರೂಪಗಳ ಉಪನ್ಯಾಸ

ಉಡುಪಿ: ಎಲ್ಲ ಶಬ್ದಗಳಿಂದಲೂ, ಅಕ್ಷರಗಳಿಂದಲೂ ಭಗವಂತನಾದ ಪದ್ಮನಾಭನು ಪ್ರತಿಪಾದಿತನಾಗಿದ್ದಾನೆ. ಮುಖ್ಯ ವೃತ್ತಿಯ ಮೂಲಕ ಲೌಕಿಕ ಅರ್ಥವು ಪ್ರತಿಪಾದಿತವಾದರೂ ಪರಮ ಮುಖ್ಯ ವೃತ್ತಿಯಲ್ಲಿ ಎಲ್ಲವೂ ಭಗವತ್​ ವಾಚಕ ಪದಗಳೇ ಆಗಿವೆ ಎಂಬ ಆಚಾರ್ಯ ಮಧ್ವರ ಸಿದ್ಧಾಂತವನ್ನು ಮೈಸೂರಿನ ಡಾ. ಶ್ರೀನಿವಾಸಮೂರ್ತಿ ಆಚಾರ್ಯ ಪ್ರಸ್ತುತಪಡಿಸಿದರು.
ಉಡುಪಿ ರಥಬೀದಿಯಲ್ಲಿರುವ ಶ್ರೀಮನ್​ ಮಧ್ವ ಸಿದ್ಧಾಂತ ಪ್ರಬೋಧಕ ಸಂಸತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಜಾರಾಮ್​ ಚೆನ್ನೈ, ಸುಬ್ಬಯ್ಯ ಶೆಟ್ಟಿ ಮುಂಬಯಿ, ವಿ.ಪ್ರಸನ್ನ ಆಚಾರ್ಯ ಪುತ್ತಿಗೆ ಮಠ ಇವರ ದತ್ತಿನಿಧಿಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಕಾವ್ಯಶಾಸ್ತ್ರ ವಿಚಾರ ಪರಿಷತ್​ನ ಪ್ರಥಮ ವಿಚಾರ ಸಂಕಿರಣದಲ್ಲಿ 'ವೇದಾಂತೇ ವೃತ್ತ್ಯಾದಿ ಸ್ವರೂಪ ವಿಮರ್ಶ;' ವಿಷಯ ಕುರಿತು ಉಪನ್ಯಾಸ ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಾ. ಡಿ.ಎಸ್​. ಅಮೃತೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಸುದೀಕ್ಷಾ ಪ್ರಾರ್ಥಿಸಿದರು. ಕಾವ್ಯಶಾಸ್ತ್ರ ವಿಚಾರ ಪರಿಷತ್​ನ ಸಂಚಾಲಕ ಡಾ. ಅಜಿತಕುಮಾರ ಆಚಾರ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸುಮುಖ ಅಡಿಗ ವಂದಿಸಿದರು. ವಿದ್ಯಾರ್ಥಿನಿ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net