ಹಿರಿಯರಿಗೆ ಕಾರಂತರ ಬದುಕು ಮಾದರಿ

ಉಡುಪಿಯಲ್ಲಿ ಆಯೋಜಿಸಿದ್ದ 'ಕಾರಂತರ ಬದುಕು-ಬರಹ' ಉಪನ್ಯಾಸ ಕಾರ್ಯಕ್ರಮವನ್ನು ಕೆ.ಮುರಳೀಧರ್​ ಉದ್ಘಾಟಿಸಿದರು. ಡಾ.ಗಣನಾಥ ಶೆಟ್ಟಿ ಎಕ್ಕಾರು, ನಿತ್ಯಾನಂದ ಪಡ್ರೆ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ಕಾರಂತರ ಬದುಕು-ಬರಹ' ಉಪನ್ಯಾಸ ಕಾರ್ಯಕ್ರಮವನ್ನು ಕೆ.ಮುರಳೀಧರ್​ ಉದ್ಘಾಟಿಸಿದರು. ಡಾ.ಗಣನಾಥ ಶೆಟ್ಟಿ ಎಕ್ಕಾರು, ನಿತ್ಯಾನಂದ ಪಡ್ರೆ ಇದ್ದರು.
Published on

* ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ಅನಿಸಿಕೆ

* ಕಾರಂತರ ಬದುಕು-ಬರಹಗಳ ಕುರಿತು ಉಪನ್ಯಾಸ

ಉಡುಪಿ: ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ ಕಾರಂತರಲ್ಲಿ ಮೂಡಿದಾಗ ಅವರು ಸ್ವಾತಂತ್ರ್ಯ ಹೋರಾಟ ಮತ್ತು ವಿವಿಧ ಸಮಾಜಮುಖಿ ಚಳವಳಿಯಲ್ಲಿ ಪಾಲ್ಗೊಳ್ಳುವಂತಾಗಿತ್ತು. ಚಿಂತನೆಗಳ ಮೂಲಕವೇ ವೈಜ್ಞಾನಿಕತೆ ಉಳಿಸಿಕೊಂಡಿದ್ದ ಅವರಲ್ಲಿ ಇಳಿ ವಯಸ್ಸಿನಲ್ಲಿಯೂ ಸಹ ಬದುಕಿನ ಕುರಿತು ಉತ್ಸಾಹ ಹೊಂದಿದ್ದರು. ಅವರ ಕೆಲಸ, ನಿಷ್ಠೆಗಳು ಇಂದಿನ ಹಿರಿಯ ನಾಗರಿಕರಿಗೆ ಮಾದರಿ ಎಂದು ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಬ್ರಹ್ಮಗಿರಿಯ ಭಾರತೀಯ ರೆಡ್​ ಕ್ರಾಸ್​ನ ಜಿಲ್ಲಾ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ಹಾಗೂ ಹಿರಿಯ ನಾಗರಿಕರ ಸಂಘ ಹಾಗೂ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲೆ ಸಹಕಾರದಲ್ಲಿ ಆಯೋಜಿಸಿದ್ದ ಕಾರಂತ ಉಪನ್ಯಾಸ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ 'ಕಾರಂತರ ಬದುಕು-ಬರಹ' ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಕೆ.ಮುರಳೀಧರ್​ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಡಾ.ಕಾರಂತ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಜುನಾಥ್​ ಕಾಮತ್​, ಸಂಕಯ್ಯ ಶೆಟ್ಟಿ ಕೆಂಜೂರು, ದ್ವಿತೀಯ ಸ್ಥಾನ ಗಳಿಸಿದ ಡಾ. ಪಿ.ಕೃಷ್ಣಪ್ರಸಾದ್​, ಗಿರಿಜಾ ಬ್ರಹ್ಮಾವರ, ತೃತೀಯ ಸ್ಥಾನ ಗಳಿಸಿದ ಸೋಮಶೇಖರ್​ ರೆಡ್ಡಿ, ಗಿಲ್ಬರ್ಟ್​ ಪಿಂಟೋ ಹಾಗೂ ಕರುಣಾ ಸುರೇಶ್​ ಪೈ ಅವರಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಸಭಾಪತಿ ಬಸರೂರು ರಾಜೀವ ಶೆಟ್ಟಿ, ಚಿಂತಕ ಮುಷ್ತಾಕ್​ ಹೆನ್ನಾಬೈಲ್​, ಪ್ರಮುಖರಾದ ಸದಾನಂದ ಹೆಗ್ಡೆ ಉಪಸ್ಥಿತರಿದ್ದರು.
ಡಾ.ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಜಿ.ಎಂ. ಶರೀಫ್​ ಹೂಡೆ ಸ್ವಾಗತಿಸಿದರು. ಉಪನ್ಯಾಸಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರ್ವಹಿಸಿದರು.
"

ಡಾ. ಕೋಟ ಶಿವರಾಮ ಕಾರಂತರು ರಚಿಸಿದ ಕಾದಂಬರಿಗಳ ಓದುವಿಕೆಯಿಂದ ಹಿರಿಯ ನಾಗರಿಕರಲ್ಲಿ ಧೈರ್ಯ ಇನ್ನಷ್ಟು ಹೆಚ್ಚಿಸುತ್ತದೆ. ಬದುಕು ಬಂದಂತೆ ಸ್ವೀಕರಿಸುವ ಮನೋಭಾವವನ್ನೂ ಸಹ ಅವರ ಕೃತಿಗಳು ಮಾರ್ಗದರ್ಶನ ನೀಡುತ್ತವೆ.

— ಡಾ.ಗಣನಾಥ ಶೆಟ್ಟಿ ಎಕ್ಕಾರು. ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net