ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 'ಸಂವಿಧಾನ ಅಂದು-ಇಂದು' ವಿಷಯ ಕುರಿತು ಉಪನ್ಯಾಸ ನೀಡಿದ ರೋಹಿತ್ ಚಕ್ರತೀರ್ಥ ಅವರನ್ನು ಗೌರವಿಸಲಾಯಿತು. ವಿ.ಗೋಪಾಲ್ ಜೋಯಿಸ, ಪ್ರೊ. ಡಿ.ಎಸ್. ಅಮೃತೇಶ ಆಚಾರ್ಯ, ವಿ. ಹೆರ್ಗ ಹರಿಪ್ರಸಾದ ಭಟ್ ಇದ್ದರು.
Published on:
Copied
Follow Us
* ರೋಹಿತ್ ಚಕ್ರತೀರ್ಥ ಉಪಸ್ಥಿತಿ
ಉಡುಪಿ: ಉಡುಪಿಯ ಶ್ರೀಮನ್ ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 'ಸಂವಿಧಾನ ಅಂದು-ಇಂದು' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖ್ಯಾತ ಅಂಕಣಕಾರ ರೋಹಿತ್ ಚಕ್ರತೀರ್ಥ ಉಪನ್ಯಾಸ ನೀಡಿ, ಪ್ರಾಚೀನ ಕಾಲದಲ್ಲಿ ಇದ್ದಂತಹ ಶಾಸ್ತ್ರೀಯ ಸಂವಿಧಾನದ ಜತೆಗೆ ಅರ್ವಾಚೀನ ಸಂವಿಧಾನದ ವಿಚಾರಗಳನ್ನು ತಿಳಿಸಿದರು.
ಎಸ್ಎಂಎಸ್ಪಿ ಸಭೆಯ ಕಾರ್ಯದರ್ಶಿ ವಿ.ಗೋಪಾಲ್ ಜೋಯಿಸ, ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ.ಎಸ್. ಅಮೃತೇಶ ಆಚಾರ್ಯ ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಿ. ಹೆರ್ಗ ಹರಿಪ್ರಸಾದ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾ. ರಾಧಾಕೃಷ್ಣ ಬಿ. ವಂದಿಸಿದರು.