ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ

 ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಸಂಸತ್ ಹಾಗೂ ವಿವಿಧ ವಿದ್ಯಾರ್ಥಿ ಸಂಗಳನ್ನು ವಿಶ್ರಾಂತ ಮುಖ್ಯ ಶಿಕ್ಷಕ ಆನಂದ ಮುದ್ದೋಡಿ ಉದ್ಘಾಟಿಸಿದರು. ಪ್ರಮುಖರಾದ ಧೀರಜ್ ಆರ್.ಶಿರೂರ್ಕರ್, ಡಾ.ರವಿದಾಸ್ ಶೆಟ್ಟಿ, ಸಾಕ್ಷತ್ ಮೊದಲಾದವರಿದ್ದರು.
ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಸಂಸತ್ ಹಾಗೂ ವಿವಿಧ ವಿದ್ಯಾರ್ಥಿ ಸಂಗಳನ್ನು ವಿಶ್ರಾಂತ ಮುಖ್ಯ ಶಿಕ್ಷಕ ಆನಂದ ಮುದ್ದೋಡಿ ಉದ್ಘಾಟಿಸಿದರು. ಪ್ರಮುಖರಾದ ಧೀರಜ್ ಆರ್.ಶಿರೂರ್ಕರ್, ಡಾ.ರವಿದಾಸ್ ಶೆಟ್ಟಿ, ಸಾಕ್ಷತ್ ಮೊದಲಾದವರಿದ್ದರು.
Published on
ಬೈಂದೂರು: ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸುವುದು ಅತ್ಯಂತ ಮುಖ್ಯ. ಶಾಲಾ ಸಂಸತ್ ರಚನೆ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ನೀಡಿದರೆ ಅವರು ಭವಿಷ್ಯದಲ್ಲಿ ದೇಶದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳುವುದರ ಜತೆಗೆ ಪ್ರಜಾಪ್ರಭುತ್ವ ಹಾಗೂ ಚುನಾವಣಾ ವ್ಯವಸ್ಥೆ ಬಗ್ಗೆ ಉತ್ತಮ ಅರಿವು ಹೊಂದಲಿದ್ದಾರೆ ಎಂದು ವಿಶ್ರಾಂತ ಮುಖ್ಯ ಶಿಕ್ಷಕ ಆನಂದ ಮುದ್ದೋಡಿ ಹೇಳಿದರು.
ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಹಾಗೂ ವಿವಿಧ ವಿದ್ಯಾರ್ಥಿ ಸಂಗಳನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನದಾ ಕಾರ್ಯದರ್ಶಿ ಧೀರಜ್ ಆರ್.ಶಿರೂರ್ಕರ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲ ಡಾ.ರವಿದಾಸ್ ಶೆಟ್ಟಿ ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ನಾಯಕನಾಗಿ ಸಾಕ್ಷತ್, ಉಪನಾಯಕಿಯಾಗಿ ಅಂಜಲಿ, ಶಿಸ್ತುಮಂತ್ರಿಯಾಗಿ ಅಫಾಫ್, ಉಪಮಂತ್ರಿಯಾಗಿ ಚಕ್ರವರ್ತಿ, ಕ್ರೀಡಾ ಮಂತ್ರಿಯಾಗಿ ಧನ್ವಿ, ಉಪಮಂತ್ರಿಯಾಗಿ ಪ್ರೀತಮ್, ಸಾಂಸ್ಕೃತಿಕ ಮಂತ್ರಿಯಾಗಿ ಜಾನ್ಹವಿ ಹಾಗೂ ಉಪಮಂತ್ರಿಯಾಗಿ ತನ್ಮಯ್ ಪ್ರವಾಣವಚನ ಸ್ವೀಕರಿಸಿದರು. ಐಶ್ವರ್ಯಾ ಸ್ವಾಗತಿಸಿದರು. ರಿತಿ ಶೆಟ್ಟಿ ನಿರೂಪಿಸಿದರು. ಮೇನಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net