ಎನ್‌ಡಿಎಯಲ್ಲಿ ನಾಯಕತ್ವ ಗುಣಕ್ಕೆ ಆದ್ಯತೆ

 ಆಳ್ವಾಸ್ ಪಪೂ ಕಾಲೇಜಿನಲ್ಲಿ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಕರ್ನಲ್ ಸೋಮು ಜಿ.ಮಹಾರಾಜನ್ ಅವರನ್ನು ಗೌರವಿಸಲಾಯಿತು. ಸದಾಕತ್, ವಿಖ್ಯಾತ ಭಟ್, ದೇವಿಪ್ರಸಾದ್ ಪದ್ಮಾರ್ ಮತ್ತಿತರರಿದ್ದರು.
ಆಳ್ವಾಸ್ ಪಪೂ ಕಾಲೇಜಿನಲ್ಲಿ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಕರ್ನಲ್ ಸೋಮು ಜಿ.ಮಹಾರಾಜನ್ ಅವರನ್ನು ಗೌರವಿಸಲಾಯಿತು. ಸದಾಕತ್, ವಿಖ್ಯಾತ ಭಟ್, ದೇವಿಪ್ರಸಾದ್ ಪದ್ಮಾರ್ ಮತ್ತಿತರರಿದ್ದರು.
Published on
ಮೂಡುಬಿದಿರೆ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಆಯ್ಕೆ ಪ್ರಕ್ರಿಯೆಯಲ್ಲಿ ಪಠ್ಯ ಜ್ಞಾನಕ್ಕಿಂತ ಅಭ್ಯರ್ಥಿಗಳ ನಾಯಕತ್ವ ಗುಣ, ವ್ಯಕ್ತಿತ್ವ, ತಾರ್ಕಿಕ ಚಿಂತನೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸರ್ವೀಸಸ್ ಸೆಲೆಕ್ಷನ್ ಬೋರ್ಡ್(ಎಸ್‌ಎಸ್‌ಬಿ) ಆಯ್ಕೆ ಪ್ರಕ್ರಿಯೆಯು ಕೇವಲ ಶೈಕ್ಷಣಿಕ ಸಾಧನೆಯನ್ನು ಪರೀಕ್ಷಿಸುವುದಿಲ್ಲ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿ ನಿರ್ದೇಶಕ ಕರ್ನಲ್ ಸೋಮು ಜಿ.ಮಹಾರಾಜನ್ ಹೇಳಿದರು.
ಆಳ್ವಾಸ್ ಪಿಯು ಕಾಲೇಜಿನಲ್ಲಿ ಮಂಗಳವಾರ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಶ್ನೋತ್ತರ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ, ಭಾರತೀಯ ಸಶಸ್ತ್ರ ಪಡೆಗಳಲ್ಲಿನ ವೃತ್ತಿ ಅವಕಾಶಗಳ ಕುರಿತು ತಮ್ಮ ಸಂದೇಹಗಳಿಗೆ ಉತ್ತರ ಪಡೆದರು. ವಿಖ್ಯಾತ ಭಟ್, ದೇವಿಪ್ರಸಾದ್ ಪದ್ಮಾರ್ ಉಪಸ್ಥಿತರಿದ್ದರು. ಶಿವಪ್ರಸಾದ್ ನಿರೂಪಿಸಿದರು.

ದೇಶ ಸೇವೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ಎನ್‌ಡಿಎ ಪರೀಕ್ಷೆ ಪ್ರತಿಷ್ಠಿತ ಅವಕಾಶ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಇದು ಅತ್ಯುತ್ತಮ ಪ್ರವೇಶದ್ವಾರವಾಗಿದ್ದು, ಗೌರವಾನ್ವಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದ ಜತೆಗೆ ನಾಯಕತ್ವ, ವ್ಯಕ್ತಿತ್ವ, ರಾಷ್ಟ್ರಸೇವೆಯ ಬದ್ಧತೆಯನ್ನು ಪರೀಕ್ಷಿಸುತ್ತದೆ.

— ಸದಾಕತ್ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net