ಸಂಘಟನೆಗಳಿಂದ ನಾಯಕತ್ವ ಗುಣ ಬೆಳವಣಿಗೆ

 ಮೂಡ್ಲಕಟ್ಟೆ ಐಎಂಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೀಜನ್‌ನ ಯುವ ವಿಭಾಗದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಮೂಡ್ಲಕಟ್ಟೆ ಐಎಂಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೀಜನ್‌ನ ಯುವ ವಿಭಾಗದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
Published on
ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೀಜನ್‌ನ ಯುವ ವಿಭಾಗದ ಉದ್ಘಾಟನೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗ್ಡೆ ಮಾತನಾಡಿ, ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇಂತಹ ಸಂಘಟನೆಗಳಲ್ಲಿ ತೊಡಗಿಕೊಂಡರೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಸಂಘಟನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸೀನಿಯರ್ ಛೇಂಬರ್ ಯುವ ವಿಭಾಗದ ರಾಷ್ಟ್ರೀಯ ಅಧಿಕಾರಿ ಹುಸೇನ್ ಹೈಕಾಡಿ ಯೂತ್ ವಿಂಗ್ ಅಧ್ಯಕ್ಷ ಅನೀಶ್ ಪೂಜಾರಿ, ಕಾರ್ಯದರ್ಶಿ ಆಸ್ಥಿಕ, ಖಜಾಂಚಿ ಲಾವಣ್ಯಾ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜ ಮಾತನಾಡಿದರು. ದೀಪಾವಳಿ ಹಬ್ಬದ ಪ್ರಯುಕ್ತ ನಡೆಸಿದ ಗೂಡುದೀಪ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ಅಕ್ಷತಾ ನಾಯಕ್, ಯೂತ್‌ವಿಂಗ್ ಸಂಯೋಜಕ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸೂಕ್ಷ್ಮಾಅಡಿಗ, ಆಶಾ ಕುಮಾರಿ, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.
ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೀಜನ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಸ್ವಾಗತಿಸಿದರು. ಇಶ್ರತ್ ನಿರೂಪಿಸಿದರು. ತೃಪ್ತಿ ಅತಿಥಿಗಳನ್ನು ಪರಿಚಯಿಸಿದರು. ಕಿರಣ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net