ಶಾಂತಿಗೋಡಿನ ಯುವತಿ ಮನೆಗೆ ಮುಖಂಡರ ಭೇಟಿ

 ಶಾಂತಿಗೋಡಿನ ಯುವತಿ ಮನೆಗೆ ಶುಕ್ರವಾರ ಪ್ರಮುಖರಾದ ಸುಂದರ ಗೌಡ, ವಾರಿಜಾ ಬೆಳ್ಳಿಯಪ್ಪ ಗೌಡ, ಮೋಹನ ಬಾಳುಗೋಡು, ಯತೀಶ್ ದೇವ, ಸಂಧ್ಯಾ ಶಶಿಧರ್ ದರ್ಬೆ ಭೇಟಿ ನೀಡಿದರು.
ಶಾಂತಿಗೋಡಿನ ಯುವತಿ ಮನೆಗೆ ಶುಕ್ರವಾರ ಪ್ರಮುಖರಾದ ಸುಂದರ ಗೌಡ, ವಾರಿಜಾ ಬೆಳ್ಳಿಯಪ್ಪ ಗೌಡ, ಮೋಹನ ಬಾಳುಗೋಡು, ಯತೀಶ್ ದೇವ, ಸಂಧ್ಯಾ ಶಶಿಧರ್ ದರ್ಬೆ ಭೇಟಿ ನೀಡಿದರು.
Published on
ಪುತ್ತೂರು ಗ್ರಾಮಾಂತರ: ತನ್ನ ಮೇಲೆ ದಾಳಿ ಮಾಡುವ ರೀತಿಯಲ್ಲಿ ಯುವಕನೊಬ್ಬ ಚಾಕು ತೋರಿಸಿ, ಬಳಿಕ ತಂಡ ವಾಹನವೊಂದರಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಿ ಶಾಂತಿಗೋಡಿನ ಯುವತಿಯೊಬ್ಬಳು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ ಘಟನೆಗೆ ಸಂಬಂಧಿಸಿ ಯುವತಿ ಮೇಲೆಯೂ ಯುವಕರು ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಮುಖರು ಶುಕ್ರವಾರ ಯುವತಿ ಮನೆಗೆ ಭೇಟಿ ನೀಡಿದರು.
ಶಾಂತಿಗೋಡು ಗ್ರಾಮದ ಆನಡ್ಕ ವಾಲ್ತಾಜೆ ನಿವಾಸಿ ಶಾಂತಪ್ಪ ಗೌಡ ಅವರ ಮನೆಗೆ ಭೇಟಿ ನೀಡಿದ ಮುಖಂಡರು ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ಸುಂದರ ಗೌಡ, ಕಾರ್ಯದರ್ಶಿಗಳಾದ ವಾರಿಜಾ ಬೆಳ್ಳಿಯಪ್ಪ ಗೌಡ, ಮೋಹನ ಬಾಳುಗೋಡು ಮತ್ತು ಯತೀಶ್ ದೇವ, ಮಹಿಳಾ ಘಟಕ ಅಧ್ಯಕ್ಷೆ ಸಂಧ್ಯಾ ಶಶಿಧರ್, ಕಾರ್ಯದರ್ಶಿಗಳಾದ ಲೇಖಾ ಗೋವರ್ಧನ್, ಮುಂಡೂರು ವಲಯ ಉಸ್ತುವಾರಿ ಭಾರತಿ ಕಾಡಮನೆ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಯಶೋದಾ ಕೆ.ಗೌಡ, ನಿಕಟ ಪೂರ್ವ ಕೋಶಾಧಿಕಾರಿಗಳಾದ ಶಿವರಾಮ ಮತಾವು, ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್., ಮುಂಡೂರು ವಲಯದ ಯುವ ಘಟಕ ಅಧ್ಯಕ್ಷ ಚಿದಾನಂದ ಸೇರಾಜೆ, ಪ್ರಮುಖರಾದ ದೇವಪ್ಪ ಗೌಡ, ಬಾಳಪ್ಪ ಕೆಲ್ಕಾರ್, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಸದಸ್ಯ ಯತೀಶ್ ಆರ್ವಾರ್ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net