ಪರಶುರಾಮ ದ್ವಾರಕ್ಕೆ ಶಿಲಾನ್ಯಾಸ

ಶಿರೂರು ಮಠಾಧೀಶ ಶ್ರೀ  ವೇದವರ್ಧನ ತೀರ್ಥ ಶ್ರೀ ಪಾದರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
Published on

ಉಡುಪಿ: ಅಂಬಾಗಿಲು ಜಂಕ್ಷನ್​ನಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರಶುರಾಮ ದ್ವಾರಕ್ಕೆ ಭಾವೀ ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್​ಪಾಲ್​ ಸುವರ್ಣ , ಪ್ರಧಾನ ಕಾರ್ಯದರ್ಶಿ ಮಟ್ಟಾರ್​ ರತ್ನಾಕರ್​ ಹೆಗ್ಡೆ , ಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯ, ಸಂಚಾಲಕ ಬೈಕಾಡಿ ಸುಪ್ರಸಾದ್​ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್​ ಕೆದ್ಲಾಯ, ವೀಣಾ ಶೆಟ್ಟಿ, ಶ್ರೀಶ ಕಡೆಕಾರ್​, ಬಾಲಾಜಿ ರಾಘವೇಂದ್ರ ಆಚಾರ್ಯ, ವಿಷ್ಣುಮೂರ್ತಿ ಪಾಡಿಗಾರ್​, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಪ್ರಚಾರ ಸಮಿತಿ ಸಂಚಾಲಕ ನಂದನ್​ ಜೈನ್​, ಮಧುಕರ್​ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net