ಅಧಿವೃದ್ಧಿ ವಿಚಾರದಲ್ಲಿ ಬೇಡ ರಾಜಕಾರಣ

ಬೈಂದೂರು ಉತ್ಸವದಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು  ಶಾಸಕ ಗುರುರಾಜ್ ಗಂಟಿಹೊಳೆ ಸನ್ಮಾನಿಸಿದರು. ಡಾ.ಎಂ.ಮೋಹನ್ ಆಳ್ವ, ಜಿಲ್ಲಾಧಿಕಾರಿ .ಸ್ವರೂಪಾ ಟಿ.ಕೆ. ಇತರರು ಇದ್ದರು.
ಬೈಂದೂರು ಉತ್ಸವದಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಶಾಸಕ ಗುರುರಾಜ್ ಗಂಟಿಹೊಳೆ ಸನ್ಮಾನಿಸಿದರು. ಡಾ.ಎಂ.ಮೋಹನ್ ಆಳ್ವ, ಜಿಲ್ಲಾಧಿಕಾರಿ .ಸ್ವರೂಪಾ ಟಿ.ಕೆ. ಇತರರು ಇದ್ದರು.
Published on
ಬೈಂದೂರು: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡೋಣ. ಉಳಿದ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ವಾತ್ರ ಗಮನ ಹರಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ನಾನು ಎಂದಿಗೂ ರಾಜಕಾರಣ ವಾಡಿಲ್ಲ, ವಾಡುವುದೂ ಇಲ್ಲ. ಅಭಿವೃದ್ಧಿಗಷ್ಟೇ ಆದ್ಯತೆ ನೀಡುತ್ತೇನೆ. ನಿಸ್ವಾರ್ಥತೆಯಿಂದ ಎಲ್ಲರೂ ಉತ್ತಮ ಕೆಲಸ ವಾಡಬೇಕು. ಮಹಾತ್ಮ ಗಾಂಧಿಯವರ ಅವರ ಪರಿಕಲ್ಪನೆಯಂತೆ ಶಾಸಕ ಗಂಟಿಹೊಳೆ ಅವರು ಕ್ಷೇತ್ರದಲ್ಲಿ ಕೆಲಸ ವಾಡುತ್ತಿದ್ದಾರೆ. ಗ್ರಾಮ ಸ್ವರಾಜ್, ಮಹಿಳೆಯರ ಅಭಿವದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೈಂದೂರು ಉತ್ಸವದಲ್ಲಿ ಭಾನುವಾರ ರಾತ್ರಿ ಭಾಗವಹಿಸಿ ಶಾಸಕ ಗಂಟಿಹೊಳೆ ಅವರ ನೂತನ ‘ದುಡ್ಮಿ’ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಭಾರತವು ಹಳ್ಳಿಗಳ ದೇಶ, ಹಳ್ಳಿಗಳು ಅಭಿವದ್ಧಿಯಾಗಬೇಕು, ಮಹಿಳೆಯರು ಸಬಲೀಕರಣ ಆಗಬೇಕು. ದೇವರು ನಮಗೆ ಕೆಲಸ ವಾಡಲು ಅವಕಾಶ ಕೊಡುತ್ತಾನೆ. ಅದನ್ನು ಸಾರ್ಥಕತೆಯಿಂದ ಮಾಡಬೇಕು. ಸಾವಾಜಿಕ ಕಾಳಜಿ, ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.
ಸಚಿವೆಯನ್ನು ಶಾಸಕ ಗುರುರಾಜ್ ಗಂಟಿಹೊಳೆ ಸನ್ಮಾನಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಎಎಸ್ಪಿ ಸುಧಾಕರ್, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net