ಗುಡ್ಡವನ್ನು ಸುರಕ್ಷಿತ ಇಳಿಜಾರಿನ ಬದಲಿಗೆ ವರ್ಟಿಕಲ್ ರೀತಿಯಲ್ಲಿ ಕತ್ತರಿಸಿರುವುದರಿಂದ ಮಣ್ಣಿನ ಗೋಡೆ ದೃಢ ಆಧಾರವಿಲ್ಲದೆ ನಿಂತಿದ್ದು, ಕುಸಿತದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮೇಲ್ಭಾಗದಲ್ಲಿ ಮೃದುವಾದ ಶಿಲೆ, ಸಡಿಲ ಕೆಂಪು ಮಣ್ಣು ಹಾಗೂ ಮುರಕಲ್ಲುಗಳ ಮಿಶ್ರಣ ಇರುವುದರಿಂದ ರಚನೆಗೆ ಸ್ಥಿರತೆ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.