ಹಳಿಯ ಮೇಲೆ ಭೂಕುಸಿತ, ರೈಲು ಸೇವೆ ವ್ಯತ್ಯಯ

train
train
Published on

ಸುಬ್ರಹ್ಮಣ್ಯ: ಸುಮಾರು ರಾತ್ರಿ 8.45ಕ್ಕೆ, ಮೈಸೂರು ವಿಭಾಗದ ಎಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲು ಹಳಿಯಲ್ಲಿ ಭೂಕುಸಿತ ಸಂಭವಿಸಿದ್ದು, ರೈಲು ಸೇವೆಗಳು ಅಸ್ತವ್ಯಸ್ತಗೊಂಡವು.

ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭವಾದ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್, ಲ್ಯಾಂಡ್‌ಸ್ಲಿಪ್ ಸ್ಥಳದಲ್ಲಿ ನಿಲ್ಲಿಸಲಾಗಿದೆ. ಮುರುಡೇಶ್ವರದಿಂದ ಪ್ರಾರಂಭವಾದ ರೈಲು ಸಂಖ್ಯೆ 16586 ಮುರುಡೇಶ್ವರ-ಎಸ್.ಎಂ.ವಿ.ಟಿ. ಬೆಂಗಳೂರು ಎಕ್ಸ್‌ಪ್ರೆಸ್ ಸಿರಿಬಾಗಿಲು ನಿಲ್ದಾಣದಲ್ಲಿ, ರೈಲು ಸಂಖ್ಯೆ 16512 ಕೋಝಿಕ್ಕೋಡ್- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು-ಕಾರವಾರ, ಪಂಚಗಂಗಾ ಎಕ್ಸ್‌ಪ್ರೆಸ್ ಅನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಪರಿಹಾರ ಸಾಮಗ್ರಿ ರೈಲು ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣದಿಂದ ರಾತ್ರಿ 10ಕ್ಕೆ ಹೊರಟು, ರಾತ್ರಿ 10.40ಕ್ಕೆ ಸಿರಿಬಾಗಿಲು ತಲುಪಿತು. ದುರಸ್ತಿ ಕಾರ್ಯಾಚರಣೆಗೆ ಸಹಾಯಕ್ಕಾಗಿ ಹಾನಿಗೊಳಗಾದ ಸ್ಥಳವನ್ನು ತಲುಪಿದೆ. ಪುನಃಸ್ಥಾಪನಾ ತಂಡಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಮತ್ತು ಕುಸಿತವಾದ ಮಣ್ಣನ್ನು ತೆರವುಗೊಳಿಸುವಲ್ಲಿ ನಿರತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಾಸನ, ಸುಬ್ರಹ್ಮಣ್ಯ ರಸ್ತೆ ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಲ್ಯಾಂಡ್ ಸ್ಲಿಪ್ ಸ್ಥಳದಲ್ಲಿ ನಿಲ್ಲಿಸಲಾದ ರೈಲು ಸಂಖ್ಯೆ 17378ರ ಪ್ರಯಾಣಿಕರಿಗೆ ಉಪಹಾರ ಸರಬರಾಜು ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net