ಬಂದ್ಯೋಡು-ಪೆರ್ಮುದೆ ರಸ್ತೆ ಬದಿ ಮಣ್ಣು ಕುಸಿತ

 ಬಂದ್ಯೋಡು-ಪೆರ್ಮುದೆ ರಸ್ತೆ ಬದಿ ಮಣ್ಣಿನ ಸವೆತ ಉಂಟಾಗಿರುವುದು.
ಬಂದ್ಯೋಡು-ಪೆರ್ಮುದೆ ರಸ್ತೆ ಬದಿ ಮಣ್ಣಿನ ಸವೆತ ಉಂಟಾಗಿರುವುದು.
Published on

ಕುಂಬಳೆ: ಮಂಜೇಶ್ವರ ಮಂಡಲದ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಂದ್ಯೋಡು-ಪೆರ್ಮುದೆ ಲೋಕೋಪಯೋಗಿ ರಸ್ತೆಯನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಹೈಟೆಕ್ ಆಗಿ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ರಸ್ತೆಯ ಬದಿಯಲ್ಲಿ ಮಣ್ಣು ಸವೆಯುತ್ತಿದ್ದು ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.

ಮಳೆಗೆ ರಸ್ತೆಯ ಅಂಚು ಕುಸಿದಿರುವುದರಿಂದ ಎರಡೂ ಕಡೆಯಿಂದ ದೊಡ್ಡ ವಾಹನಗಳು ಬಂದಾಗ ಸೈಡ್ ಕೊಡುವ ಭರದಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಗಳು ಅಲ್ಲಲಿ ಸಂಪೂರ್ಣ ಮುಚ್ಚಿ ಹೋಗಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net