ಆರ್ಟಿಐ ಕಾಯಿದೆಯ ಬಲವನ್ನು ಸಂಪೂರ್ಣವಾಗಿ ಕುಗ್ಗಿಸಲಾಗಿದೆ. ಆ ಮಟ್ಟದಲ್ಲಿ ಭ್ರಷ್ಟಾಚಾರ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ವಿವಿಧ ಭ್ರಷ್ಟಾಚಾರ ಬಯಲಿಗೆಳೆದ ಅನೇಕರ ಹತ್ಯೆಯನ್ನೂ ಮಾಡಲಾಗಿದೆ. ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲೆಡೆ ಭ್ರಷ್ಟಾಚಾರ ತುಂಬಿಕೊಂಡಿದೆ. ಇದನ್ನು ವಿರೋಧಿಸಿ ಬದಲಾವಣೆ ತರಲು, ರಾಜ್ಯ-ದೇಶದಲ್ಲಿ ಒಳ್ಳೆಯ ಆಡಳಿತ ಜಾರಿಗೆ ಬರಲು ಜನರೇ ಭ್ರಷ್ಟಾಚಾರ ವಿರೋಧಿಸುವಂತಾಗಬೇಕು. ಅದಕ್ಕಾಗಿ ಜಾಗೃತಿ, ಅರಿವು ಕಾರ್ಯಕ್ರಮ ಅತ್ಯಗತ್ಯ ಎಂದರು.