ಉಡುಪಿಯ ಡಾ. ಜಿ.ಶಂಕರ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 'ಲಕ್ಷ್ಯ' ಕಾರ್ಯಕ್ರಮವನ್ನು ರೋವೆನಾ ಫೆರ್ನಾಂಡಿಸ್ ಉದ್ಘಾಟಿಸಿದರು. ಮಲ್ಲಿಕಾ, ಪ್ರೊ. ಸೋಜನ್ ಕೆ.ಜಿ., ಕೃಷ್ಣ ಭಟ್, ಪ್ರೊ. ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಡಾ. ವಾರಿಜಾ ಇತರರಿದ್ದರು.
Published on:
Copied
Follow Us
* ಉದ್ಯಮಿ ರೋವೆನಾ ಫೆರ್ನಾಂಡಿಸ್ ಅಭಿಪ್ರಾಯ
* ಮಹಿಳಾ ಕಾಲೇಜ್ನಲ್ಲಿ ಲಕ್ಷ್ಯ' ನಿರ್ವಹಣಾ ಹಬ್ಬ
ಉಡುಪಿ: ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು. ಅದರೊಟ್ಟಿಗೆ ಆಸಕ್ತಿ, ಶ್ರದ್ಧೆ, ಧೈರ್ಯ ಮತ್ತು ಸೃಜನಶೀಲ ಭಾವವೂ ಇರಬೇಕು. ಸತತ ಪ್ರಯತ್ನವೂ ಸಹ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಮಹಿಳಾ ಉದ್ಯಮಿ ಮತ್ತು ಫುಡ್ ಬ್ಲಾಗರ್ ಆದ ರೋವೆನಾ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ. ಸಭಾಂಗಣದಲ್ಲಿ ವಾಣಿಜ್ಯಶಾಸ್ತ್ರ, ನಿರ್ವಹಣಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಾಸಕೋಶದ ವತಿಯಿಂದ ಹಮ್ಮಿಕೊಂಡಿದ್ದ ನಿರ್ವಹಣಾ ಹಬ್ಬ 'ಲಕ್ಷ್ಯ-2026' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜ್ನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ, ಐಕ್ಯುಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯಶಾಸ್ತ್ರ ಪಿ.ಜಿ. ವಿಭಾಗದ ಸಂಯೋಜಕಿ ಡಾ. ವಾರಿಜಾ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಅಬ್ದುಲ್ ರಜಾಕ್ ವಂದಿಸಿದರು. 'ಲಕ್ಷ್ಯ' ಕಾರ್ಯಕ್ರಮದ ನಿಮಿತ್ತ ಕಾಲೇಜ್ನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವಿವಿಧ ಅಂಗಡಿ, ಸ್ಟಾಲ್ಗಳು ಗಮನ ಸೆಳೆದವು.
"
ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆ ಸಾಧನೆ ತೋರುತ್ತಿದ್ದಾಳೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಗೆ ಉತ್ತಮ ಅವಕಾಶಗಳಿವೆ. ತಮಗೆ ಆಸಕ್ತಿಯಿರುವ ಕ್ಷೇತ್ರ ಆಯ್ದುಕೊಂಡು, ಶ್ರಮಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಲಭಿಸಲು ಸಾಧ್ಯ.