ಅಂತರ್ಜಲ ಉಳಿಯಲು ಕೆರೆಗಳು ಅಗತ್ಯ

ಪುನಶ್ಚೇತನಗೊಳಿಸಿದ ಕೆರೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪುನಶ್ಚೇತನಕ್ಕಾಗಿ ದುಡಿದ ದವರನ್ನು ಗೌರವಿಸಲಾಯಿತು. ಶಾಸಕ ಸುನೀಲ್ ಕುಮಾರ್, ನೀರೆ ಕೃಷ್ಣ ಶೆಟ್ಟಿ, ನಾಗರಾಜ ಶೆಟ್ಟಿ ಮತ್ತಿತರರಿದ್ದರು.
ಪುನಶ್ಚೇತನಗೊಳಿಸಿದ ಕೆರೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪುನಶ್ಚೇತನಕ್ಕಾಗಿ ದುಡಿದ ದವರನ್ನು ಗೌರವಿಸಲಾಯಿತು. ಶಾಸಕ ಸುನೀಲ್ ಕುಮಾರ್, ನೀರೆ ಕೃಷ್ಣ ಶೆಟ್ಟಿ, ನಾಗರಾಜ ಶೆಟ್ಟಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕೆರೆಯನ್ನು ಉಳಿಸಿದಾಗ ಅದು ಭವಿಷ್ಯಕ್ಕೆ ಪೂರಕವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಯಾಗಿ ಕೃಷಿ ಪೂರಕ ವಾತಾವರಣ ನಿರ್ಮಾಣವಾಗಲು ಕೆರೆಗಳು ಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮ ಪಂಚಾಯಿತಿ, ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನಗೊಳಿಸಿದ 954ನೇ ಕೆರೆ ಮೇಲ್ಬೇಟ್ಟು ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿದರು.
ಶ್ರೀ ನಾರಾಯಾಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ 954ನೇ ನಮ್ಮೂರು ನಮ್ಮ ಕೆರೆಯನ್ನು ಮುದ್ರಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು. ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆಯನ್ನು ಪುನಶ್ಚೇತನಗೊಳಿಸಲು ಮುತುವರ್ಜಿ ವಹಿಸಿದ ಯೋಜನೆಯ ಕೃಷಿ ವಿಭಾಗದ ಮೇಲ್ವೀಚಾರಕ ಉಮೇಶ್ ಬಿ.ಕೆ, ಯಂತ್ರದ ಕೆಲಸ ನಿರ್ವಹಿಸಿದ ತಿಪ್ಪೇಶ್, ಯೋಜನಾಧಿಕಾರಿ ರೇಷ್ಮಾ ಎಸ್, ಕೆರೆ ಪುನಶ್ಚೇತನಕ್ಕೆ ಶ್ರಮಿಸಿದ ಹಲವರನ್ನು ಗೌರವಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು. ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ನಮ್ಮೂರು ನಮ್ಮ ಕೆರೆ ಯೋಜನೆಯ ಮಾಹಿತಿ ನೀಡಿದರು. ಮುದ್ರಾಡಿ ಮೇಲ್ಬೇಟ್ಟು ಮದಗ ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಗಣಪತಿ ಮುದ್ರಾಡಿ, ಅಧ್ಯಕ್ಷ ಸುಧಾಕರ ಶೆಟ್ಟಿ, ಯೋಜನೆಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಹೆಬ್ರಿ ವಾದಿರಾಜ ಶೆಟ್ಟಿ, ರತ್ನಾಕರ ಪೂಜಾರಿ ಮಾತಿಬೆಟ್ಟು, ಯೋಗೀಶ್, ಮುದ್ರಾಡಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಿಥುನ್, ಪಿಡಿಒ ಸುಭಾಸ್ ಖಾರ್ವಿ, ಮೇಲ್ವಿಚಾರಕ ಉಮೇಶ್, ಸೇವಾ ಪ್ರತಿನಿಧಿಗಳಾದ ಮಮತಾ, ಸುಜಯಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಪ್ರಮುಖರು, ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ರಚಿತಾ ನಿರೂಪಿಸಿದರು. ಉಮೇಶ್ ಬಿಕೆ. ವಂದಿಸಿ ರೇಷ್ಮಾ ಎಸ್ ಸ್ವಾಗತಿಸಿದರು.

ಜನಜೀವನಕ್ಕೆ ಎಲ್ಲ ಅವಶ್ಯಕತೆಯ ಜತೆಗೆ ನಮ್ಮೂರಿನ ಕೆರೆಗಳು ಅತಿ ಮುಖ್ಯವಾಗಿವೆ. ಈ ತನಕ ರಾಜ್ಯಾದ್ಯಂತ ಮುಚ್ಚಿ ಹೋಗಿರುವ 954 ಕೆರೆಗಳನ್ನು ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳ ಸಹಕಾರದಲ್ಲಿ ಪುನಶ್ಚೇತನಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತಿರುವುದು ಅದ್ಭುತ ಕಾರ್ಯ. ಗ್ರಾಮ ಪಂಚಾಯಿತಿಗಳು ಸಮಿತಿಯನ್ನು ರಚಿಸಿ ಅತ್ಯುತ್ತಮವಾಗಿ ಕೆರೆಯನ್ನು ನಿರ್ವಹಣೆ ಮಾಡಬೇಕು.

— ಸುನೀಲ್ ಕುಮಾರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net