ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಪೌಷ್ಟಿಕ ಪಾನೀಯ, ಸೋಪು, ಎಣ್ಣೆ, ಹಲ್ಲುಜ್ಜುವ ಪೇಸ್ಟ್, ಇನ್ನಿತರ ವಸ್ತುಗಳು ರೋಗಿಗಳಿಗೆ ಅಗತ್ಯತೆ ಇರುತ್ತದೆ. ಅಲ್ಲದೆ, ಶವ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಇಡುವ ವಾರೀಸುದಾರರು ಇರುವ ಮತ್ತು ಇಲ್ಲದ ಶವಗಳಿಗೆ ಪ್ಲಾಸ್ಟಿಕ್ ಹೊದಿಕೆ, ದೇಹದ ಭಾಗಗಳನ್ನು ಸಂಗ್ರಹಿಸಿಡುವ ಪ್ಲಾಸ್ಟಿಕ್ ಡಬ್ಬ, ಸುಗಂಧ ದ್ರವ್ಯ ಇನ್ನಿತರ ಪರಿಕರಗಳು ತೀವ್ರ ಅಗತ್ಯತೆ ಇರುತ್ತದೆ. ಆದರೆ, ಅವು ಅಲ್ಲಿ ಲಭಿಸದ್ದರಿಂದ ಖರೀದಿಗೆ ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದೆ.