ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರು ನಿರಂತರ ಮೂರು ದಶಕಗಳ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರೃ ಲಭಿಸಿ 79 ವರ್ಷ ಕಳೆದರೂ ಇಲ್ಲಿ ವಿದ್ಯುತ್, ಸರಿಯಾದ ರಸ್ತೆ ಇಲ್ಲದಿರುವುದು ವ್ಯವಸ್ಥೆ ಜಡ್ಡುತನಕ್ಕೆ, ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿ ಸುಮಾರು ಆದಿವಾಸಿ ಮಲೆಕುಡಿಯ ಸಮುದಾಯದ 45ಕ್ಕೂ ಹೆಚ್ಚು ಕುಟುಂಬಗಳು ಎರಡು ಶತಮಾನಗಳಿಂದ ಕೃಷಿ ಕೃತಾವಳಿ ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ ಈಗಲೂ ಅದೇ ಚಿಮಿಣಿ ದೀಪದ ಜೀವನ, ಅದೇ ಪಕ್ಕಾ ಮಣ್ಣಿನ ರಸ್ತೆ. ಇದೇ ಅವರ ಜೀವನ ಎಂಬಂತಾಗಿದೆ.