ಕುಂಟಾರಿನ ಕಪ್ಪು ಬಂಗಾರ ಆನ್‌ಲೈನ್ ಮಾರ್ಕೆಟ್‌ಗೆ

 ಕುಂಟಾರಲ್ಲಿರುವ ಗೇರು ತೋಟದಲ್ಲಿ ಸಿದ್ಧವಾದ ಕಾಳುಮೆಣಸು ಮತ್ತು ಕಾಳುಮೆಣಸಿನ ಹುಡಿ
ಕುಂಟಾರಲ್ಲಿರುವ ಗೇರು ತೋಟದಲ್ಲಿ ಸಿದ್ಧವಾದ ಕಾಳುಮೆಣಸು ಮತ್ತು ಕಾಳುಮೆಣಸಿನ ಹುಡಿ
Published on
ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ಕೇರಳ ಕೃಷಿ ಇಲಾಖೆ ಗ್ರೋ ಬ್ರ್ಯಾಂಡಿಂಗ್ ಯೋಜನೆಯಡಿ ಕಾಳುಮೆಣಸು ಮತ್ತು ಕಾಳುಮೆಣಸಿನ ಹುಡಿಯನ್ನು ಆನ್‌ಲೈನ್ ವಾರುಕಟ್ಟೆಗೆ ಪರಿಚಯಿಸುತ್ತಿದೆ. ಸಂಪೂರ್ಣ ಸಾವಯವ ರೀತಿಯಲ್ಲಿ ಅಡೂರು ಗಾಳಿಮುಖದ ಕುಂಟಾರಿನ ಗೇರು ತೋಟದಲ್ಲಿ ಬೆಳೆಯುವ ಈ ಉತ್ಪನ್ನಗಳು ಸದ್ಯದಲ್ಲೇ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸದ್ಯ ಕುಂಟಾರಿನಲ್ಲಿ ಕಾಳುಮೆಣಸನ್ನು ಮಾರಾಟ ಮಾಡಲಾಗುತ್ತಿದ್ದು, ಎರಡು ವಾರಗಳಲ್ಲಿ ಆನ್‌ಲೈನ್ ಮಾರುಕಟ್ಟೆ ಮೂಲಕ 100 ಗ್ರಾಂ ಹಾಗೂ 250 ಗ್ರಾಂ ತೂಕದ ಪ್ಯಾಕೆಟ್‌ಗಳಲ್ಲಿ ಗ್ರಾಹಕರ ಕೈಸೇರಲಿದೆ.
ಅಡೂರು ಗಾಳಿಮುಖ ಉಪವಿಭಾಗದ ಉಸ್ತುವಾರಿ ಕೃಷಿ ಅಧಿಕಾರಿ ವಿ.ಸೂರಜ್ ನೇತೃತ್ವದಲ್ಲಿ ತೋಟದ ನಿರ್ವಹಣೆ, ಉತ್ಪಾದನೆ ಹಾಗೂ ಕಾರ್ಮಿಕರ ನಿರ್ವಹಣೆ ನಡೆಯುತ್ತಿದೆ. ಮಾರಾಟ, ಖರೀದಿ ಮತ್ತಿತರ ಉಸ್ತುವಾರಿಯನ್ನು ಗೇರು ಅಭಿವೃದ್ಧಿ ಅಧಿಕಾರಿ ಮನು ನರೇಂದ್ರನ್ ನೋಡಿಕೊಳ್ಳುತ್ತಾರೆ. ಕುಂಟಾರು ಗೇರು ತೋಟ ಕೃಷಿ ಸಚಿವಾಲಯದ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದಿಂದ ಮಾನ್ಯತೆ ಪಡೆದ ಕೇರಳದ ಮೊದಲ ಸರ್ಕಾರಿ ತೋಟವೆಂಬ ಖ್ಯಾತಿಯನ್ನೂ ಹೊಂದಿದೆ.

ಸಾವಯವ ಕೃಷಿ ವಿಧಾನದಲ್ಲಿ ಕಾಳುಮೆಣಸು ಬೆಳೆಸಲಾಗುತ್ತಿದೆ. ಮಣ್ಣು ಮತ್ತು ಹವಾವಾನ ಪೂರಕವಾಗಿರುವ ಕಾರಣ, ಗುಣಮಟ್ಟದ ಕಾಳುಮೆಣಸು ಲಭಿಸುತ್ತಿದೆ. ವಾರುಕಟ್ಟೆ ವ್ಯಾಪ್ತಿ ಬೆಳೆಸಲು ಆನ್‌ಲೈನ್ ವಾರುಕಟ್ಟೆ ಪರಿಣಾಮಕಾರಿ. ಎರಡು ವಾರಗಳಲ್ಲಿ ಆನ್‌ಲೈನ್‌ನಲ್ಲಿ ಇಲ್ಲಿನ ಕಾಳುಮೆಣಸು ಹಾಗೂ ಉತ್ಪನ್ನಗಳು ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net