

ಅಬ್ಬಕ್ಕ ವೃತ್ತದಿಂದ ಕೋಡಿ ಕೋಟೆಪುರ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ರಸ್ತೆ ಬದಿಯ ಕಟ್ಟಡಗಳ ಮೆಟ್ಟಿಲುಗಳನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾಗ ಬಿಟ್ಟುಕೊಟ್ಟರೆ ರಸ್ತೆ ಅಗಲೀಕರಣ ಸುಲಲಿತವಾಗಲಿದೆ.
ಕುಂಪಲ ರಸ್ತೆ 47 ವರ್ಷಗಳ ಹಳೆಯದಾಗಿದ್ದು, ಈ ಭಾಗ ಭಾರೀ ಅಭಿವೃದ್ಧಿಯಿಂದಾಗಿ ಇಂದು ವಾಹನ ಸಂಚಾರಕ್ಕೆ ರಸ್ತೆ ಸಾಕಾಗುತ್ತಿಲ್ಲ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಭೂಸ್ವಾಧೀನಕ್ಕೆ ಸರ್ಕಾರ ದೊಡ್ಡ ಮೊತ್ತದ ಅನುದಾನ ಮೀಸಲಿಡಬೇಕಿದ್ದು, ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕು.
ಕುಂಪಲ ರಸ್ತೆ ಮೇಲ್ದರ್ಜೆಗೇರಿಸುವಂತೆ ಗ್ರಾ.ಪಂ. ಅವಧಿಯಲ್ಲೂ ಜಿಲ್ಲಾ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಪುರಸಭೆಯ ಸಾಮಾನ್ಯ ಸಭೆಯಲ್ಲೂ ಈ ಕುರಿತು ನಿರ್ಣಯ ಕೈಗೊಂಡು, ಜಿಲ್ಲಾಧಿಕಾರಿಗಳ ಮೂಲಕ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.