ಸುಬ್ರಹ್ಮಣ್ಯ: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಪ್ರಾಂತ್ಯ 8ಕ್ಕೆ ಈ ಬಾರಿಯ ಬೆಸ್ಟ್ ಇಮೇಜ್ ಬಿಲ್ಡಿಂಗ್ ಪ್ರಾಜೆಕ್ಟ್ ಪುರಸ್ಕಾರ ಲಭಿಸಿದೆ. ಕುಮಾರಧಾರಾ ಸೇತುವೆ ಎರಡು ಬದಿಗಳಲ್ಲಿ ಸಾರ್ವಜನಿಕರು ನದಿಗೆ ಕಸ ಎಸೆಯದಂತೆ ತಡೆ ಬೇಲಿ ನಿರ್ಮಾಣ ಯೋಜನೆಗೆ ಪುರಸ್ಕಾರ ಸಂದಿದೆ. ಲಯನ್ಸ್ ಜಿಲ್ಲೆ 317 ಡಿ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನೊಳಗೊಂಡ 119 ಕ್ಲಬ್‌ಗಳನ್ನು ಹೊಂದಿದೆ.