ಎಸ್​ಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೃಷ್ಣಮೂರ್ತಿ ಡಿ.ಬಿ.

ಉಡುಪಿ ಜಿಲ್ಲಾ ಬಿಜೆಪಿ ಎಸ್​ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ನೇಮಗೊಂಡ ಕೃಷ್ಣಮೂರ್ತಿ ಡಿ.ಬಿ.
ಉಡುಪಿ ಜಿಲ್ಲಾ ಬಿಜೆಪಿ ಎಸ್​ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ನೇಮಗೊಂಡ ಕೃಷ್ಣಮೂರ್ತಿ ಡಿ.ಬಿ.
Published on

* ನೇಮಕಗೊಂಡ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅನುಮೋದನೆ ಮೇರೆಗೆ ಉಡುಪಿ ಜಿಲ್ಲಾ ಬಿಜೆಪಿ ಎಸ್​ಸಿ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೃಷ್ಣಮೂರ್ತಿ ಡಿ.ಬಿ. ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಹೆರಿಯಣ್ಣ ಅಮ್ಮುಂಜೆ, ಮಾಧವ ಸಾಲಿಗ್ರಾಮ, ಅನಿತಾ ಸಾಲಿಯಾನ್​, ಸುಂದರ್​ ಕೆ., ಸುಂದರ್​ ಬಾಬು ನಿಯುಕ್ತರಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಸದಾನಂದ್​ ಕೈಪುಂಜಾಲು, ಸುಧಾಕರ್​ ಅಮೀನ್​, ಕಾರ್ಯದರ್ಶಿಗಳಾಗಿ ಸುಂದರ್​ ಬಿ. ಈದು, ಸುರೇಶ್​ ಮೂಡುಬಗೆ, ಸದಾನಂದ್​ ಚಾಂತಾರು, ಬೇಬಿ ರಾಜೇಶ್​, ರೇಖಾ ಶಂಕರ್​, ಕೋಶಾಧಿಕಾರಿಯಾಗಿ ಈಶ್ವರ್​ ಶೀರೂರು, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಅರುಣ್​ ಕುಮಾರ್​ ನೇಮಕವಾಗಿದ್ದಾರೆ.
ಕಾರ್ಯಕಾರಿಣಿ ಸದಸ್ಯರಾಗಿ ಹರಿಶ್ಚಂದ್ರ, ಸುಂದರ್​ ಎ., ಕಿರಣ್​ ಕುಮಾರ್​, ಪ್ರದಿಪ್​ ಮಾರ್ಗೊಳ್ಳಿ, ಶಿವಾನಂದ್​, ವೀಣಾ, ಸುರೇಶ್​, ಅಣ್ಣಪ್ಪ, ಯಶೋದಾ, ಕೃಷ್ಣ, ಗೀತಾ, ಉದಯ ಕುಮಾರ್​ ಬತ್ತಡ, ಮಂಜುಳಾ, ರವೀಂದ್ರ ಎಸ್​. ಸೌಕೂರು, ಹರ್ಷ, ನಾಗರತ್ನಾ ನೇಮಕವಾಗಿದ್ದಾರೆ ಎಂದು ಕೃಷ್ಣಮೂರ್ತಿ ಡಿ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net