ಕೋಟ ಜಾತ್ರೆ ಏಲಂ ಗಲಾಟೆ

ಕೋಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ್ದ ವ್ಯಾಪಾರಿಗಳು, ಗ್ರಾಮಸ್ಥರು.
ಕೋಟ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ್ದ ವ್ಯಾಪಾರಿಗಳು, ಗ್ರಾಮಸ್ಥರು.
Published on

ವಿಜಯವಾಣಿಸುದ್ದಿಜಾಲ ಕೋಟ

ಕೋಟಅಮೃತೇಶ್ವರಿ ದೇಗುಲದ ಜಾತ್ರೆಹಿನ್ನೆಲೆಯಲ್ಲಿ ಕೋಟ ಗ್ರಾಮಪಂಚಾಯಿತಿ ಸ್ಥಳ ಏಲಂನಲ್ಲಿ ದುಬಾರಿದರ ವಿಧಿಸಿರುವುದಕ್ಕೆ ವ್ಯಾಪಾರಸ್ಥರು,ಗ್ರಾಮಸ್ಥರುಆಕ್ರೋಶ ವ್ಯಕ್ತಪಡಿಸಿದ ಘಟನೆಸೋಮವಾರ ನಡೆಯಿತು.

.10,11ರಂದುಜಾತ್ರೆ ಜರುಗಲಿದ್ದು,ಇದರಪೂರ್ವಭಾವಿಯಾಗಿ ಕೋಟ ಗ್ರಾಪಂಇತ್ತೀಚೆಗೆ ಸ್ಥಳದ ಏಲಂ ಪ್ರಕ್ರಿಯೆಪೂರ್ಣಗೊಳಿಸಿತ್ತು.

ಸೋಮವಾರಸ್ಥಳ ಏಲಂ ನಡೆಸಲಾಗುತ್ತಿತ್ತು.ಸ್ಥಳಏಲಂನಲ್ಲಿ ದರ ದುಬಾರಿ ಮಾಡಿರುವುದುಸರಿಯಲ್ಲ.ಸಣ್ಣವ್ಯಾಪಾರಸ್ಥರು ಹೊಟ್ಟೆಪಾಡಿಗಾಗಿಅಂಗಡಿ ಮುಂಗಟ್ಟು ಇರಿಸುತ್ತಾರೆ.ಆದರೆಪಂಚಾಯಿತಿ ಏಕಾಏಕಿ ದೊಟ್ಡ ಮಟ್ಟದಲ್ಲಿಟೆಂಡರ್‌ನ್ನು ಹೊರಗಿನ ವ್ಯಕ್ತಿಯೊಬ್ಬರಿಗೆನೀಡಿದೆ ಎಂದು ಗ್ರಾಮಸ್ಥರು ಆಕ್ರೋಶಹೊರಹಾಕಿದರು.ಪರಿಸ್ಥಿತಿವಿಕೋಪಕ್ಕೆ ಹೋಗಿ ಗ್ರಾಪಂ ಆವರಣದಲ್ಲಿವ್ಯಾಪಾರಸ್ಥರು,ಗ್ರಾಮಸ್ಥರುಜಮಾಯಿಸಿದರು.ಪಂಚಾಯಿತಿಅಧಿಕಾರಿ ಹಾಗೂ ಸದಸ್ಯರೊಬ್ಬರನ್ನುತರಾಟೆ ತೆಗೆದುಕೊಂಡರು.

ಜಾತ್ರಾಟೆಂಡರ್‌ನಲ್ಲಿ ಲೋಪ ಎಸಗಲಾಗಿದೆ.ಪ್ರತಿವರ್ಷಟೆಂಡರ್ ದರ ಏರಿಸಲಾಗುತ್ತಿದೆ.ಇದುಸರಿಯಲ್ಲ ಟೆಂಡರ್ ದರ ಕಡಿಮೆ ಮಾಡಿವಾಪಸ್ ಟೆಂಡರ್ ಆಹ್ವಾನಿಸಬೇಕೆಂದುಗ್ರಾಮಸ್ಥರು ಆಗ್ರಹಿಸಿದರು.

ಕಾನೂನು ಪ್ರಕಾರ ಟೆಂಡರ್ ಪ್ರಕಿಯೆ ಆಗಿದೆ. ಟೆಂಡರ್‌ದಾರರಿಂದ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ ಎಂದು ದೂರು ಬಂದಿದೆ. ಟೆಂಡರ್‌ದಾರನನ್ನು ಕರೆಸಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net