ಕೋಟ: ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಹಾಲುಹಬ್ಬ ಗೆಂಡೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಹರಕೆ ರೂಪದಲ್ಲಿ ಗೆಂಡೋತ್ಸವದಲ್ಲಿ ಭಾಗಿಯಾದರು.
ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ತಾಯಿಯನ್ನು ಸಂದರ್ಶಿಸಿ ಶ್ರೀ ನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿದ ನಂತರ ಭಕ್ತರು ಹರಕೆ ಸಲ್ಲಿಸಿದರು. ಧಾರ್ಮಿಕ ಕಾರ್ಯವನ್ನು ಶಂಕರ್ ಆಚಾರ್, ನರಸಿಂಹ ಆಚಾರ್, ಬಾಬುರಾಯ ಆಚಾರ್, ಮಂಜುನಾಥ್ ಆಚಾರ್ ನೆರವೇರಿಸಿದರು.
ದೇಗುಲದ ಅರ್ಚಕ ವರ್ಗ, ಜೋಗಿ ಸಮುದಾಯದವರು ಈ ಕೈಂಕರ್ಯದಲ್ಲಿ ಭಾಗವಹಿಸಿದರು. ರಾತ್ರಿ ಮಹಾಅನ್ನಸಂತರ್ಪಣೆಯನ್ನು ಸಾವಿರಾರು ಭಕ್ತರು ಸ್ವೀಕರಿಸಿದರು. ವಿವಿಧ ಸಂ ಸಂಸ್ಥೆಗಳು ಗೆಂಡೋತ್ಸವದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡರು.
ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್, ಮಂಡಳಿ ಸದಸ್ಯರಾದ ರತನ್ ಐತಾಳ್, ಸುಭಾಶ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ.ಕಾಂಚನ್, ಸುಧಾ ಎ.ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಮತ್ತು ವಾಜಿ ಟ್ರಸ್ಟಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.