ಕೊರಗ ಕಾಲನಿಗೆ ರಸ್ತೆ ನಿರ್ಮಿಸಿರುವುದಾಗಿ ಸಂಸದರ ನಿಧಿಯಿಂದ ಹಣ ಪಡೆದುಕೊಂಡು ಮೇಲ್ವರ್ಗದವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ವಾಣ ವಾಡಿರುವುದನ್ನು ಸ್ಥಳೀಯ ನಿವಾಸಿಗಳು ಖಂಡಿಸಿದರು. ಪ್ರಮುಖರಾದ ಮಹಾಲಕ್ಷ್ಮೀ ಮಹಾದೇವ್, ಸತೀಶ್ ಕಂಚುಗೋಡು, ಸವಿನ್ ಬಾವಿಕಟ್ಟೆ ಮೊದಲಾದವರಿದ್ದರು.
ಕೊರಗ ಸಮುದಾಯದ ಕಾಲನಿಗೆ ರಸ್ತೆ ನಿರ್ಮಿಸಿರುವುದಾಗಿ ಸಂಸದರ ನಿಧಿಯಿಂದ ಹಣ ಪಡೆದು ಮೇಲ್ವರ್ಗದವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ಮಿಸಿ ಅನ್ಯಾಯ ಎಸಗಿದ್ದಾರೆ ಎಂದು ಸ್ಥಳೀಯ ಕೊರಗ ಸಮುದಾಯದ ನಿವಾಸಿಗಳು ಆರೋಪಿಸಿದ್ದಾರೆ.
ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಶೋಷಿತ ವರ್ಗದ ಹೆಸರನ್ನು ತಮ್ಮ ಸೌಲಭ್ಯಕ್ಕಾಗಿ ಬಳಸಲಾಗಿದೆ. ಈ ಬಗ್ಗೆ ಗುತ್ತಿಗೆದಾರರು ರಸ್ತೆ ನಿರ್ವಾಣ ನಾಮಫಲಕ ಅಳವಡಿಸಿದಾಗ ಅದರಲ್ಲಿ ಕೊರಗರ ಕಾಲನಿ ಅಭಿವೃದ್ಧಿಪಡಿಸಲು ರಸ್ತೆ ನಿರ್ಮಿಸಿರುವುದಾಗಿ ದಾಖಲಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಕೊರಗ ಸಮುದಾಯ ವಂಚನೆಗೊಳಗಾಗಿದ್ದೇವೆ ಎಂದು ಅಳಲು ತೋಡಿಕೊಂಡಿದೆ.
ದಲಿತ ಸಂರ್ಷ ಸಮಿತಿ ಭೀಮವಾದ ಸಂಚಾಲಕಿ ಮಹಾಲಕ್ಷ್ಮೀ ಮಹಾದೇವ್ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಬೇಕು. ನೋಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ಅಂಬೇಡ್ಕರ್ ಸೇನೆಯ ಕುಂದಾಪುರ ತಾಲೂಕು ಅಧ್ಯಕ್ಷ ಸವಿನ್ ಬಾವಿಕಟ್ಟೆ, ಅಂಬೇಡ್ಕರ್ ಸೇನೆಯ ಬೈಂದೂರು ತಾಲೂಕು ಅಧ್ಯಕ್ಷ ಉದಯ್ ಬೈಂದೂರು, ಸ್ಥಳೀಯ ನಿವಾಸಿಗಳಾದ ಶೇಖರ್, ರಾಜು, ಇಂದಿರಾ, ವಿನೋದ್, ದೀಪಾ, ಮಧು, ನೇತ್ರಾವತಿ, ಅಭಿಷೇಕ್, ಉಷಾ, ಲಕ್ಷ್ಮೀ ಮತ್ತಿತರರಿದ್ದರು.