ಕಳೆದ 46 ವರ್ಷಗಳಿಂದ ಕೊಂಕಣಿ ಸಾಹಿತ್ಯಿಕ ಪುಸ್ತಕಗಳನ್ನು ಹಾಗೂ ಸಿಡಿಗಳನ್ನು ಊರಿಂದೂರಿಗೆ ಕೊಂಡುಹೋಗಿ ಮಾರಿ, ಸಾಹಿತ್ಯ ಸೇವೆ ಮಾಡುತ್ತಿರುವ ಆಲ್ವಿನ್ ಸಿಕ್ವೇರಾ ಇವರನ್ನು ಸನ್ಮಾನಿಲಾಯಿತು. ಕವಿ ಅರವಿಂದ ಶ್ಯಾನ್‌ಭಾಗ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಮರ್ಲಿನ್ ಮಸ್ಕರೇನ್ಹಸ್, ನವೀನ್ ಕುಲ್ಶೇಕರ್, ವಾಯ್ಲೆಟ್ ಪಿರೇರಾ, ಸುಮಾ ವಸಂತ್, ರಿಚ್ಚಿ ಪಿರೇರಾ, ಪ್ರೀತಾ ಮಿರಾಂದ, ಸ್ಟ್ಯಾನಿಸ್ಲಸ್ ಡಿಸೋಜ, ಎಡ್ವರ್ಡ್ ಲೋಬೊ, ಅರುಣ್ ದಾಂತಿ, ಸಪ್ನಾ ಮೇ ಕ್ರಾಸ್ತಾ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯೆ ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು