ಭಾಷೆ, ಸಂಸ್ಕೃತಿ ರಕ್ಷಣೆ ನಮ್ಮ ಹೊಣೆ

ಉಡುಪಿಯಲ್ಲಿ ಆಯೋಜಿಸಿದ್ದ ಕೊಂಕಣಿ ಮಾನ್ಯತಾ ದಿವಸ್​ ಕಾರ್ಯಕ್ರಮದಲ್ಲಿ ಸಾಹಿತಿ ಲೋಯ್​ ಕ್ಯಾಸ್ಟಲಿನೋ ಅವರನ್ನು ಸನ್ಮಾನಿಸಲಾಯಿತು. ಡೆನ್ನಿಸ್​ ಡೇಸಾ, ಲೆಸ್ಲಿ ಕರ್ನೇಲಿಯೋ, ಯು.ಕಲ್ಯಾಣಿ ಪೈ, ವಸಂತ್​ ನಾಯಕ್​, ಮ್ಯಾಕ್ಸಿಂ ಡಿಸೋಜ, ಮೈಕಲ್​ ಡಿಸೋಜ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಕೊಂಕಣಿ ಮಾನ್ಯತಾ ದಿವಸ್​ ಕಾರ್ಯಕ್ರಮದಲ್ಲಿ ಸಾಹಿತಿ ಲೋಯ್​ ಕ್ಯಾಸ್ಟಲಿನೋ ಅವರನ್ನು ಸನ್ಮಾನಿಸಲಾಯಿತು. ಡೆನ್ನಿಸ್​ ಡೇಸಾ, ಲೆಸ್ಲಿ ಕರ್ನೇಲಿಯೋ, ಯು.ಕಲ್ಯಾಣಿ ಪೈ, ವಸಂತ್​ ನಾಯಕ್​, ಮ್ಯಾಕ್ಸಿಂ ಡಿಸೋಜ, ಮೈಕಲ್​ ಡಿಸೋಜ ಇತರರಿದ್ದರು.
Published on

* ಫಾದರ್​ ಡೆನ್ನಿಸ್​ ಡೇಸಾ ಅಭಿಪ್ರಾಯ

* ಕೊಂಕಣಿ ಮಾನ್ಯತಾ ದಿವಸ್​ ಆಚರಣೆ

ಉಡುಪಿ: ಇಂದಿನ ಬಹುತೇಕ ಮಕ್ಕಳು ಇಂಗ್ಲಿಷ್​ ಮೀಡಿಯಂನಲ್ಲಿ ಕಲಿಯುತ್ತಿದ್ದಾರೆ. ಇದು ಇಂದಿನ ಅನಿವಾರ್ಯತೆ ಆಗಿದ್ದರೂ ಸಹ ಮನೆಯಲ್ಲಿ ಕೊಂಕಣಿಯಲ್ಲಿ ಮಾತನಾಡಬೇಕು. ನಮ್ಮ ಮಾತೃಭಾಷೆಯನ್ನು ನಾವೇ ಬೆಳೆಸದಿದ್ದರೆ ಹೇಗೆ? ಪಾಲಕರು ಮನೆಯಲ್ಲಿ ಮಕ್ಕಳೊಂದಿಗೆ ಕೊಂಕಣಿಯಲ್ಲಿ ಮಾತನಾಡಬೇಕು. ತನ್ಮೂಲಕ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ನಾವೇ ಬೆಳೆಸಬೇಕು ಎಂದು ಉಡುಪಿ ಶೋಕ ಮಾತಾ ಚರ್ಚ್​ನ ಫಾದರ್​ ಡೆನ್ನಿಸ್​ ಡೇಸಾ ಕರೆ ನೀಡಿದರು.
ಉಡುಪಿ ಶೋಕ ಮಾತಾ ಚರ್ಚ್​ನಲ್ಲಿರುವ ಕೊಂಕಣಿ ಭಾಷಾ ಮಂಡಳಿಯ ಶಾಖೆಯಲ್ಲಿ ಗುರುವಾರ (ಆ.20) ಆಯೋಜಿಸಿದ್ದ 'ಕೊಂಕಣಿ ಮಾನ್ಯತಾ ದಿವಸ್​' ಆಚರಣೆಯಲ್ಲಿ ಮಾತನಾಡಿದರು.

ಕೊಂಕಣಿ ಭಾಷೆಯ ಉದಯೋನ್ಮುಖ ಸಾಹಿತಿ ಲಾಯ್​ ಕ್ಯಾಸ್ಟಲಿನೋ ಅವರನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಕೊಂಕಣಿ ಭಾಷೆಯ ಬೆಳವಣಿಗೆ ಕುರಿತು ನೇರೀ ಕರ್ನೇಲಿಯೋ ಮಾತನಾಡಿದರು.

ಮಾಜಿ ಅಧ್ಯಕ್ಷೆ ಯು.ಕಲ್ಯಾಣಿ ಪೈ, ಉಪಾಧ್ಯಕ್ಷ ವಸಂತ್​ ನಾಯಕ್​, ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಸಿಂ ಡಿಸೋಜ, ಖಜಾಂಚಿ ಮೈಕಲ್​ ಡಿಸೋಜ ಉಪಸ್ಥಿತರಿದ್ದರು.
ಮಂಡಳಿಯ ಅಧ್ಯಕ್ಷ ಲೆಸ್ಲಿ ಕರ್ನೇಲಿಯೋ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಆನಂದ್​ ಪೈ ವಾರ್ಷಿಕ ವರದಿ ವಾಚಿಸಿದರು. ವೆರೋನಿಕಾ ಸಲ್ಡಾನಾ ವಂದಿಸಿದರು. ಪ್ರಮೀಳಾ ರೋಡ್ರಿಗಸ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net