ಕೊಂಕಣ ರೈಲ್ವೆ ಕಾರ್ಪೊರೇಷನ್ನನ್ನು 1990ರಲ್ಲಿ ರೈಲ್ವೆ ಸಚಿವಾಲಯದೊಂದಿಗೆ ಮಹಾರಾಷ್ಟ್ರ ಗೋವಾ, ಕರ್ನಾಟಕ ಮತ್ತು ಕೇರಳ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ರೋಹ್ದಿಂದ, ಕರ್ನಾಟಕದ ತೋಕೂರ್ವರೆಗೆ ಕೊಂಕಣ ರೈಲ್ವೆ ವಿಸ್ತರಿಸಲಾಗಿದೆ. ರೈಲ್ವೆ ನಿಗಮಕ್ಕೆ ಭಾರತ ಸರ್ಕಾರವು ಶೇ.66.35 ಅನುದಾನ ಒದಗಿಸುತ್ತದೆ. ಮಹಾರಾಷ್ಟ್ರ ಸರ್ಕಾರ ಶೇ.15.11, ಕರ್ನಾಟಕ ಶೇ.10-.30, ಗೋವಾ 4-.12, ಕೇರಳ 4.-12 ಅನುದಾನ ಒದಗಿಸಿದೆ. ಹೀಗಾಗಿ ಈ ನಾಲ್ಕು ರಾಜ್ಯಗಳ ನಿರ್ಧಾರಗಳು ವಿಲೀನ ಪ್ರಕ್ರಿಯೆಗೆ ಸಹಕರಿಸಬೇಕಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದರು.