ಗಂಗೊಳ್ಳಿ, ಗುಜ್ಜಾಡಿ ಹಾಗೂ ನಾಯಕವಾಡಿಯಿಂದ ಕುಂದಾಪುರ, ಬೈಂದೂರು ಕಡೆಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಮುಖ್ಯ ವಾರ್ಗ ಇದಾಗಿದ್ದು, ಒಂದು ವೇಳೆ ಈ ಕಿರು ಸೇತುವೆ ಕುಸಿದು ಬಿದ್ದಲ್ಲಿ ಗಂಗೊಳ್ಳಿ, ಕುಂದಾಪುರ ಮತ್ತು ಬೈಂದೂರಿನ ಸಂಪರ್ಕ ಕಡಿತಗೊಳ್ಳಲಿದೆ. ಹೀಗಾದರೆ ಸಾವಿರಾರು ಜನರು ತಮ್ಮ ದೈನಂದಿನ ಕಾರ್ಯಗಳಿಗೆ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಬರಬೇಕಾದರೆ ಮುಳ್ಳಿಕಟ್ಟೆ ವಾರ್ಗವಾಗಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.