ಮೊಗವೀರಪಟ್ಣ ಮಾರುತಿ ಯುವಕ ಮಂಡಲದಲ್ಲಿ ಟೈಲರಿಂಗ್ ತರಬೇತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದಿನೇಶ್ ಕರ್ಕೇರ, ಆದರ್ಶ್ ಆರ್., ಶರ್ಮಿಳಾ, ಸಂಪನ್ಮೂಲ ವ್ಯಕ್ತಿ ನಿಶಾ ಮೊದಲಾದವರಿದ್ದರು.
ಉಳ್ಳಾಲ: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಹಿಳಾ ಜ್ಞಾನವಿಕಾಸ ಲಕ್ಷಾಂತರ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗಿಗಳನ್ನಾಗಿ ಮಾಡಿ ಕುಟುಂಬದಲ್ಲಿ ನೆಮ್ಮದಿ ತಂದುಕೊಟ್ಟ ಕೀರ್ತಿಗೆ ಭಾಜನರಾಗಿದೆ ಎಂದು ಮಾರುತಿ ಜನಸೇವಾ ಟ್ರಸ್ಟ್ ನಿಕಟಪೂರ್ವ ಗೌರವಾಧ್ಯಕ್ಷ ದಿನೇಶ್ ಕರ್ಕೇರ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಪ್ರಯುಕ್ತ ಉಳ್ಳಾಲ ಮೊಗವೀರಪಟ್ಣ ಮಾರುತಿ ಜನಸೇವಾ ಟ್ರಸ್ಟ್, ಮಾರುತಿ ಯುವಕ ಮಂಡಲದ ಸಹಯೋಗದಲ್ಲಿ ಭಾನುವಾರ ಮೊಗವೀರಪಟ್ಣ ಮಾರುತಿ ಯುವಕ ಮಂಡಲದಲ್ಲಿ ಉಚಿತ ಟೈಲರಿಂಗ್ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಉಳ್ಳಾಲ ವಲಯ ಮೇಲ್ವಿಚಾರಕ ಆದರ್ಶ್ ಆರ್.ಮಾರುತಿ ಮಹಿಳಾ ಮಂಡಲ ಅಧ್ಯಕ್ಷ ಶರ್ಮಿಳಾ, ಸಂಪನ್ಮೂಲ ವ್ಯಕ್ತಿ ನಿಶಾ, ಜ್ಞಾನ ವಿಕಾಸ ಸಂಯೋಜಕಿ ದೇವಯಾನಿ ಮೊದಲಾದವರಿದ್ದರು.
ಸೇವಾ ಪ್ರತಿನಿಧಿ ಶಾಂತಿ ಕರುಣಾಕರ ಸ್ವಾಗತಿಸಿದರು. ಕಾವ್ಯಶ್ರೀ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾಚಂದ್ರ ಕಾರ್ಯಕ್ರಮ ನಿರೂಪಿಸಿದರು.