ಜೀವರಕ್ಷಕ ತಂತ್ರ ಸಿಪಿಆರ್​ ಜ್ಞಾನ ಎಲ್ಲರಿಗೂ ಅಗತ್ಯ

ಉಡುಪಿ ಎಂಜಿಎಂ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರದಲ್ಲಿ ಸಿಪಿಆರ್​ ಕೌಶಲ ಕುರಿತು ಡಾ.ರೋಹನ್​ ಎಸ್​. ಮೋನಿಸ್​ ಮಾಹಿತಿ ನೀಡಿದರು. ಡಾ.ಎರಿಕ್​ ಲೋಬೋ, ಪೀಟರ್​ ಪಿಂಟೋ, ಡಾ.ರಮೇಶ್​ ಕುಮಾರ್​, ಡಾ.ಲೇಖನ್​ ಗೌಡ, ಡಾ.ರೇಖಾ ಎನ್​.ಚಂದ್ರ ಇದ್ದರು.
ಉಡುಪಿ ಎಂಜಿಎಂ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರದಲ್ಲಿ ಸಿಪಿಆರ್​ ಕೌಶಲ ಕುರಿತು ಡಾ.ರೋಹನ್​ ಎಸ್​. ಮೋನಿಸ್​ ಮಾಹಿತಿ ನೀಡಿದರು. ಡಾ.ಎರಿಕ್​ ಲೋಬೋ, ಪೀಟರ್​ ಪಿಂಟೋ, ಡಾ.ರಮೇಶ್​ ಕುಮಾರ್​, ಡಾ.ಲೇಖನ್​ ಗೌಡ, ಡಾ.ರೇಖಾ ಎನ್​.ಚಂದ್ರ ಇದ್ದರು.
Published on: 

* ಕಣಚೂರು ಆಸ್ಪತ್ರೆ ಆಡಳಿತಾಧಿಕಾರಿ ಡಾ.ರೋಹನ್​ ಮೋನಿಸ್​ ಅನಿಸಿಕೆ

* ಎಂಜಿಎಂ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರದಲ್ಲಿ ಪ್ರಾತ್ಯಕ್ಷಿಕೆ

ಉಡುಪಿ: ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್​(ಎಇಡಿ) ಹಾಗೂ ಸಿಪಿಆರ್​ಅನ್ನು ಯಾವುದೇ ವಯಸ್ಸಿನ, ಯಾವುದೇ ವಿದ್ಯಾರ್ಹತೆ ಹೊಂದಿದವರೂ ಮಾಡಬಹುದಾದ ಉತ್ತಮ ವ್ಯವಸ್ಥೆ. ಜೀವರಕ್ಷಕ ತಂತ್ರವಾದ ಸಿಪಿಆರ್​ ಜ್ಞಾನ ಎಲ್ಲರಿಗೂ ಅಗತ್ಯ. ಸಿಪಿಆರ್​ ಕೌಶಲ ಕಲಿತು ಮನೆ, ಕಾಲೇಜ್​ ಹಾಗೂ ಸಮಾಜದಲ್ಲಿ ಉಪಯೋಗಿಸಿ ಇನ್ನೊಬ್ಬರ ಜೀವ ಉಳಿಸಿ ಎಂದು ಮಂಗಳೂರಿನ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್​ ಎಸ್​. ಮೋನಿಸ್​ ಹೇಳಿದರು.

ಪಡುಬೆಳ್ಳೆಯಲ್ಲಿ ನಡೆಯುತ್ತಿರುವ ಎಂಜಿಎಂ ಕಾಲೇಜ್​ನ ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​)ಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಣಚೂರು ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ಸ್​ ಹಾಗೂ ಕ್ಯಾಥೊಲಿಕ್​ ಅಸೋಸಿಯೇಷನ್​ ಆಫ್​ ಸೌತ್​ ಕೆನರಾ (ಕಾಸ್ಕ್​) ಸಹಭಾಗಿತ್ವದಲ್ಲಿ ಆಯೋಜಿಸಿದ್ದ 'ಸಿಪಿಆರ್​ ಜಾಗೃತಿ ಹಾಗೂ ಪ್ರಾತ್ಯಕ್ಷಿಕೆ' ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಸ್ಕ್​ ಅಧ್ಯಕ್ಷ ಡಾ.ಎರಿಕ್​ ಲೋಬೋ, ಕಾಸ್ಕ್​ ಗವರ್ನಿಂಗ್​ ಕೌನ್ಸಿಲ್​ ಸದಸ್ಯ ಪೀಟರ್​ ಪಿಂಟೋ, ಕಣಚೂರು ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್​ ವಿಭಾಗದ ಡಾ.ರಮೇಶ್​ ಕುಮಾರ್​, ಡಾ.ಲೇಖನ್​ ಗೌಡ, ಎನ್​ಎಸ್​ಎಸ್​ ಘಟಕ&2ರ ಅಧಿಕಾರಿ ಡಾ.ರೇಖಾ ಎನ್​.ಚಂದ್ರ ಉಪಸ್ಥಿತರಿದ್ದರು.

ಎನ್​ಎಸ್​ಎಸ್​ ಅಧಿಕಾರಿ ಸುಚಿತ್​ ಕೋಟ್ಯಾನ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸುವೀಕ್ಷಾ ಸ್ವಾಗತಿಸಿದರು. ಧನ್ಯಾ ಪರಿಚಯಿಸಿದರು. ರೀತಿಕಾ ವಂದಿಸಿದರು. ಸೋನಿ ಪ್ರಕಾಶ್​ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಸ್ವಯಂಸೇವಕರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಪೂರ್ಣ ತರಬೇತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net