ಕಿಂಡಿ ಅಣೆಕಟ್ಟು ನೀರು ಸೋರಿಕೆಗೆ ಮುಕ್ತಿ

 ವಂಡ್ಸೆ ಗ್ರಾಮದ ಬಾಳಿಕೆರೆ ಸಮೀಪದ ಆತ್ರಾಡಿ ಬಳಿ ಚಕ್ರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯನ್ನು ಹತೋಟಿಗೆ ತರಲಾಗಿದೆ.
ವಂಡ್ಸೆ ಗ್ರಾಮದ ಬಾಳಿಕೆರೆ ಸಮೀಪದ ಆತ್ರಾಡಿ ಬಳಿ ಚಕ್ರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯನ್ನು ಹತೋಟಿಗೆ ತರಲಾಗಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಂಡ್ಸೆ ಗ್ರಾಮದ ಬಾಳಿಕೆರೆ ಸಮೀಪದ ಆತ್ರಾಡಿ ಬಳಿ ಚಕ್ರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಲ್ಲಿ ದುರಸ್ತಿ ಬಳಿಕವೂ ಉಂಟಾಗಿದ್ದ ನೀರು ಸೋರಿಕೆ ಸಮಸ್ಯೆಯನ್ನು ಪರಿಹರಿಸಲಾಗಿದೆ. ಕಾಮಗಾರಿಯಲ್ಲಿ ಆಗಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ ರಬ್ಬರ್ ಬೀಡಿಂಗ್ ಅಳವಡಿಸಿ ನೀರು ಸೋರಿಕೆಯನ್ನು ಸಂಪೂರ್ಣ ಹತೋಟಿಗೆ ತರಲಾಗಿದೆ.
ಈ ಅಣೆಕಟ್ಟು ನಿರ್ವಾಣವಾಗಿ 2 ವರ್ಷ ಕಳೆದರೂ ರೈತರಿಗೆ ಪ್ರಯೋಜನವಾಗಿರಲಿಲ್ಲ. ಇದರ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚುವರಿಯಾಗಿ 2 ಕೋಟಿ ರೂ. ಮಂಜೂರಾಗಿತ್ತು. ಆದರೂ ನೀರು ಸೋರಿಕೆ ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಣೆಕಟ್ಟಿನಿಂದ ನೀರು ಸೋರಿಕೆ ಸರಿಪಡಿಸಿದ್ದಾರೆ.
ಅಣೆಕಟ್ಟಿನಲ್ಲಿ ನೀರಿನ ಶೇಖರಣೆ ಹೆಚ್ಚಾಗುತ್ತಿದೆ. ಮೇ ತನಕ ಈ ಅಣೆಕಟ್ಟಿನ ಮೂಲಕ ಕೃಷಿ ಚಟುವಟಿಕೆ ಮೊದಲಾದ ಕಾರ್ಯಗಳಿಗೆ ಬಳಸಿಕೊಳ್ಳುವಷ್ಟು ನೀರು ಸಂಗ್ರಹವಾಗುತ್ತಿದೆ. ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ವಂಡ್ಸೆ, ಕಟ್‌ಬೇಲ್ತೂರು, ದೇವಲ್ಕುಂದ ಗ್ರಾಮಗಳ ಪ್ರದೇಶದಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವ ಮಹತ್ವಾಕಾಂಕ್ಷೆ ಉದ್ದೇಶದಿಂದ ಆತ್ರಾಡಿ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟನ್ನು ಸಣ್ಣ ನೀರಾವರಿ ಇಲಾಖೆಯಿಂದ 7.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಕಿಂಡಿ ಅಣೆಕಟ್ಟು ಅವಶ್ಯ

ಡ್ಯಾಂನ ಮೂರು ಕಡೆಗಳಲ್ಲಿ ಹೊಳೆಯ ದಂಡೆ ತಗ್ಗಾಗಿದ್ದು, ನೀರು ಒಳಗೆ ನುಗ್ಗದಂತೆ ಕಿಂಡಿ ಅಣೆಕಟ್ಟು ಅಗತ್ಯವಿದೆ. ಹೊಳೆಯ ದಂಡೆ ತಗ್ಗು ಇರುವ ಕಡೆ ನದಿ ದಂಡೆ ಸಂರಕ್ಷಣಾ ಕಾಮಗಾರಿ ನಡೆಯಬೇಕು ಎಂದು ಈ ಭಾಗದ ರೈತರು ಒಕ್ಕೊರಿಲಿನಿಂದ ಆಗ್ರಹಿಸಿದ್ದಾರೆ.

ಬಾಳಿಕೆರೆ ಸಮೀಪ ಆತ್ರಾಡಿ ಡ್ಯಾಂನಲ್ಲಿ ನೀರು ಸೋರಿಕೆ ತಡೆಗಟ್ಟಲು ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆದಿದೆ. ನೀರು ಸಂಗ್ರಹ ಸಾಮರ್ಥ್ಯ ಉದ್ದೇಶದಿಂದ 2 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ಎತ್ತರವನ್ನು ಮೂರು ಅಡಿ ಹೆಚ್ಚಿಸಲಾಗಿದೆ. ಕಾಮಗಾರಿಯಲ್ಲಿ ಆಗಿರುವ ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿ ನೀರು ಸೋರಿಕೆ ಸಂಪೂರ್ಣ ಹತೋಟಿಗೆ ತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net