ಅಪಹರಣ ಆರೋಪಿ ಬಂಧನ

Arrest
Arrest
Published on

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಹಣ ಎಗರಿಸಿದ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆಟ್ಟುಂಗುಳಿ ಎಸ್.ಪಿ ನಗರದ ಸೈನುಲ್ ಆಬೀದ್ (34) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೈನುಲ್ ಆಬೀದ್ ಬಂಧನಕ್ಕೆ ಮೇಲ್ಪರಂಬ ಠಾಣೆ ಪೊಲೀಸರು ಆತನ ಮನೆಗೆ ತೆರಳುತ್ತಿದ್ದಂತೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಜೀಪಿನಲ್ಲಿ ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಆ.24ರಂದು ರಾತ್ರಿ 9 ಗಂಟೆ ವೇಳೆಗೆ ಕಳನಾಡು ಕೋಡಂಕೈ ನಿವಾಸಿ ಕೆ.ಎ.ಮುಹಮ್ಮದ್ ಆನ್ಸೀನ್ (19) ಎಂಬಾತನನ್ನು ಕಾರಿನಲ್ಲಿ ಅಪಹರಿಸಿದ ತಂಡ ಕೊಲೆ ಬೆದರಿಕೆಯೊಡ್ಡಿ ಗೂಗಲ್ ಪೇ ಮೂಲಕ ಆತನಿಂದ 20,000 ರೂ. ಎಗರಿಸಿತ್ತು. ಇನ್ನೋರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net