ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬೆಳೆಸಲು ಕ್ರೀಡೆ ಸಹಕಾರಿ: ಸ್ತುತಿ ಶೆಟ್ಟಿ

ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
Published on
ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಬೆಳೆಸಲು ಕ್ರೀಡೆ ಸಹಾಯಕವಾಗುತ್ತದೆ. ಯುವಜನತೆ ಸಮಯ ಹಾಗೂ ಸಾಮರ್ಥ್ಯವನ್ನು ಪೋಲು ಮಾಡಬಾರದು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಲು ಕ್ರೀಡೆ ಅಡ್ಡಿಯಾಗುವುದಿಲ್ಲ ಎಂದು ರಾಷ್ಟ್ರ ಮಟ್ಟದ ಅಥ್ಲೆಟಿಕ್​ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಹೇಳಿದರು.

ಎಂಜಿಎಂ ಕಾಲೇಜು ರವೀಂದ್ರ ಮಂಟಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಆಶ್ರಯದಲ್ಲಿ ನಡೆದ ಪ್ರಧಾನಮಂತ್ರಿಗಳ 'ಖೇಲೋ ಇಂಡಿಯಾ' ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಖೇಲೋ ಇಂಡಿಯಾದಂತಹ ಅಭಿಯಾನದ ಮೂಲಕ ಸರ್ಕಾರ ಯುವಜನತೆಯಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುತ್ತಿದೆ ಎಂದರು.

ಕಾಲೇಜಿನ ಸುಮಾರು 350 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಗಳ ಭಾಷಣ ಆಲಿಸಿದರು. ಪ್ರಧಾನ ಮಂತ್ರಿಗಳ ಭಾಷಣದ ಬಳಿಕ ಕ್ರೀಡಾಪಟು ಸ್ತುತಿ ಪಿ.ಶೆಟ್ಟಿ ಜೊತೆ ಕಾಲೇಜಿನ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಶಾ ಮುಕ್ತ ಅಭಿಯಾನಯ ಪ್ರತಿಜ್ಞೆ ಸ್ವೀಕರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಪೈ, ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ ಪೈ, ಎನ್​ಎಸ್​ಎಸ್​ ಅಧಿಕಾರಿಗಳಾದ ಸುಚಿತ್​ ಕೋಟ್ಯಾನ್​, ಡಾ.ರೇಖಾ ಎನ್​.ಚಂದ್ರ, ಮೈ ಭಾರತ್​ ಕೇಂದ್ರದ ಶ್ಯಾಮಲಾ, ಎನ್​ಐಸಿಯ ಗೌತಮ್​ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನಘಾ ಮೇಲಂಟ, ಪ್ರಾಪ್ತಿ ಶೆಟ್ಟಿ ಹಾಗೂ ದೀಪಕ್​ ಹೆಗ್ಡೆ ಸಂವಾದ ನಿರೂಪಿಸಿದರು.

ಸಂವಾದಕ್ಕೆ 'ಎ ಕೆಟಗರಿ'ಯಲ್ಲಿ ಆಯ್ಕೆಯಾದ ಮಂಗಳೂರು ವಿವಿಯ ಏಕೈಕ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಎಂಬ ಹೆಗ್ಗಳಿಕೆಗೆ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಪಾತ್ರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net