ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಖೇಲ್ ಕೂದ್ ಮಹೋತ್ಸವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ನೋವೊ ಟ್ರೀ ಮೈಂಡ್ಸ್ ಸಂಸ್ಥೆಯ ಸಹನಾ ನಾಗರಾಜ್, ಸಕ್ಷಮಾ ಸಂಚಾಲಕಿ ಡಾ.ಗ್ರೀಷ್ಮಾ ಆಳ್ವ ಮೊದಲಾದವರಿದ್ದರು.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಮಹಿಳಾ ಸಂಘ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಳ್ವಾಸ್‌ನ ಮಹಿಳಾ ಸಿಬ್ಬಂದಿಗೆ ಖೇಲ್ ಕೂದ್ ಮಹೋತ್ಸವ ಆಯೋಜಿಸಲಾಯಿತು.
ಒಂದು ವರ್ಷದ ಅವಧಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ಶಿಕ್ಷಕ ಹಾಗೂ ಶಿಕ್ಷಕೇತರ ಮಹಿಳಾ ಸಿಬ್ಬಂದಿಗಾಗಿ ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದ್ದು, ಅದರ ಸಮಾರೋಪವಾಗಿ ಈ ಖೇಲ್ ಕೂದ್ ಮಹೋತ್ಸವವನ್ನು ಆಚರಿಸಲಾಯಿತು.
ನೋವೊ ಟ್ರೀ ಮೈಂಡ್ಸ್ ಸಂಸ್ಥೆಯ ಸಹನಾ ನಾಗರಾಜ್ ಮುಖ್ಯ ಅತಿಥಿಯಾಗಿದ್ದರು. ಕಬಡ್ಡಿ ವಿಶ್ವಕಪ್‌ನ ಚಿನ್ನದ ಪದಕ ವಿಜೇತೆ ಹಾಗೂ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಧನಲಕ್ಷ್ಮೀ ಉದ್ಘಾಟಿಸಿದರು. ಸಕ್ಷಮಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಸಕ್ಷಮಾ ಸಂಚಾಲಕಿ ಡಾ.ಗ್ರೀಷ್ಮಾ ಆಳ್ವ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದ ತಂಡದ ಪರಿಶ್ರಮವನ್ನು ಪ್ರಶಂಸಿದರು.
ಸಕ್ಷಮಾ ಅಧ್ಯಕ್ಷೆ ಡಾ.ಅರ್ಚನಾ ಪ್ರಭಾತ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ದೀಪಾ ಕೊಠಾರಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು. ನಿಯತಿ ಕಾರ್ಯಕ್ರಮ ನಿರೂಪಿಸಿದರು. ಸಕ್ಷಮಾ ಕ್ರೀಡಾ ಕಾರ್ಯದರ್ಶಿ ದಿವ್ಯಾ ಭಂಡಾರಿ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಜೀವಿತಾ ಶಂಕರ್ ಮುಖ್ಯ ಅತಿಥಿಯಾಗಿದ್ದರುರು.
----ಪೋಟೋ-----
ಎಂಬಿಡಿ_ಮಾರ್ಚ್9_3 ಅಳ್ವಾಸ್ ಕೇಲ್‌ಕುದ್
ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಖೇಲ್ ಕೂದ್ ಮಹೋತ್ಸವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ನೋವೊ ಟ್ರೀ ಮೈಂಡ್ಸ್ ಸಂಸ್ಥೆಯ ಸಹನಾ ನಾಗರಾಜ್, ಸಕ್ಷಮಾ ಸಂಚಾಲಕಿ ಡಾ.ಗ್ರೀಷ್ಮಾ ಆಳ್ವ ಮೊದಲಾದವರಿದ್ದರು.