ಡ್ರಗ್ಸ್ ಮಾಫಿಯಾ ತಡೆಗೆ ಖಾಕಿ ಡ್ರಿಲ್

ಸಾಂದರ್ಭಿಕ ಫೋಟೋ
ಸಾಂದರ್ಭಿಕ ಫೋಟೋ
Published on
ವಿಜಯವಾಣಿ ಸುದ್ದಿಜಾಲ ಕುಂಬಳೆ
ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಮಾಫಿಯಾ ವಿರುದ್ಧ ಪೊಲೀಸರು ಸತತ ಕಾರ್ಯಾಚರಣೆ ನಡೆಸುವುದರ ಜತೆಗೆ ಕಠಿಣಕ್ರಮ ಕೈಗೊಳ್ಳುತ್ತಿದ್ದು, 2025-26ರಲ್ಲಿ ಮಾದಕ ವಸ್ತುಗಳ ಕಾಯ್ದೆ ಅಡಿಯಲ್ಲಿ 1,600ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಜತೆಗೆ ವಾಣಿಜ್ಯ ಪ್ರಕರಣದಲ್ಲ್ಲಿ ತೊಡಗಿರುವವರ ವಿರುದ್ಧ ನಡೆಸಲಾಗದ ಕಾರ್ಯಾಚರಣೆಯಲ್ಲಿ 45 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್‌ಭರತ್ ರೆಡ್ಡಿ ಮಾರ್ಗದರ್ಶನದಲ್ಲಿ ವಿವಿಧ ಠಾಣೆಗಳಿಂದ ಮಾದಕ ವಸ್ತುಗಳ ನಿಗ್ರಹ ಕಾರ್ಯಾಚರಣೆ ನಡೆಯಿತು. 2025ರಲ್ಲಿ ಜಿಲ್ಲೆಯಲ್ಲಿ 1,224 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 1,363 ಆರೋಪಿಗಳನ್ನು ಬಂಧಿಸಲಾಗಿದೆ.
ದಾಖಲಾದ ಪ್ರಕರಣಗಳಲ್ಲಿ 22 ವಾಣಿಜ್ಯ ಪ್ರಕರಣಗಳಾಗಿವೆ. 50 ಪ್ರಕರಣಗಳು ಮಧ್ಯಮ ಪ್ರಮಾಣದ ಮತ್ತು 116 ಪ್ರಕರಣಗಳು ಸಣ್ಣ ಪ್ರಮಾಣದ ಮಾದಕ ವಸ್ತುಗಳ ಪ್ರಕರಣಗಳಾಗಿವೆ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.
2026ರ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈ ವರ್ಷ 193 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 241 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಎಂಟು ಪ್ರಕರಣಗಳಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ಮೇಲೆ ಕಣ್ಗಾವಲು

ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಮಾದಕ ದ್ರವ್ಯ ಪೂರೈಸುವ ಜಾಲ ಪತ್ತೆಹಚ್ಚಲು ಸೈಬರ್ ಹಾಗೂ ಗುಪ್ತಚರ ಇಲಾಖೆಯಿಂದ ವಿಶೇಷ ಕಣ್ಗಾವಲು ಇಡಲಾಗಿದೆ.

ಮುಖ್ಯ ಪೊಲೀಸ್ ತಪಾಸಣೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯಗಳನ್ನು ಪೂರೈಸುವ ಗ್ಯಾಂಗ್‌ಗಳನ್ನು ಪತ್ತೆಹಚ್ಚಲು ಸೈಬರ್ ಕಣ್ಗಾವಲು ಮತ್ತು ಗುಪ್ತಚರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಅಘೆಖಅಊ (ಈಜಿಠ್ಟಿಜ್ಚಿಠಿ ಅ್ಞಠಿಜಿಘೆಚ್ಟ್ಚಟಠಿಜ್ಚಿ ಖಛ್ಚಿಜಿಚ್ಝ ಅ್ಚಠಿಜಿಟ್ಞ ಊಟ್ಟ್ಚಛಿ.) ತಂಡ ಮತ್ತು ಠಾಣೆ ಪೊಲೀಸರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈಗಾಗಲೇ ಹಲವು ತಂಡಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಬಕಾರಿ ಇಲಾಖೆಯಿಂದಲೂ ಕಾರ್ಯಾಚರಣೆ

ಪೊಲೀಸ್ ಇಲಾಖೆಯೊಂದಿಗೆ ಅಬಕಾರಿ ಇಲಾಖೆಯೂ ಕಾರ್ಯಾಚರಣೆ ನಡೆಸುತ್ತಿದ್ದು, 2025ರಲ್ಲಿ 21 ಪ್ರಕರಣಗಳು ದಾಖಲಾಗಿದ್ದು, 2.5 ಕಿಲೋಗ್ರಾಂ ಗಾಂಜಾ ಮತ್ತು 71.158 ಗ್ರಾಂ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ವಿದ್ಯಾರ್ಥಿಗಳಿಂದ 85.590 ಎಂಡಿಎಂಎ ಮತ್ತು 66.860 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಮಾದಕ ದ್ರವ್ಯಗಳ ಮಾರಾಟ ಮತ್ತು ಸಾಗಣೆ ನಿಯಂತ್ರಿಸಲು ಕಠಿಣ ಕ್ರಮಗಳು ಮುಂದುವರಿಯಲಿದೆ. ಭವಿಷ್ಯದಲ್ಲಿ ಮಾದಕ ದ್ರವ್ಯ ವ್ಯಾಪಾರ ತಡೆಗೆ ವ್ಯಾಪಾರಿಗಳ ಬಂಧನ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಯುವಪೀಳಿಗೆಯನ್ನು ಮಾದಕ ದ್ರವ್ಯ ಜಾಲದ ಹಿಡಿತದಿಂದ ರಕ್ಷಿಸುವುದು ಮುಖ್ಯ ಗುರಿಯಾಗಿದೆ. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯಿಲ್ಲ.

— ವಿಜಯಭರತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net