ಕೆಸರುಗದ್ದೆ ಕ್ರೀಡಾಕೂಟಗಳಿಂದ ಕೃಷಿ ಆಸಕ್ತಿ

 ಸಾಂತನಮಕ್ಕಿ ಗದ್ದೆಯಲ್ಲಿ ‘ಗೊಂಸರ್ ಗದ್ದೆ’ ಗ್ರಾಮೀಣ ಕ್ರೀಡಾಕೂಟವನ್ನು ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಉದ್ಘಾಟಿಸಿದರು. ಪ್ರಮುಖರಾದ ವೈ.ಪಟ್ಟಾಭಿರಾಮ್ ಭಟ್ ಮರೂರು, ಪ್ರಶಾಂತ ಹೆಗ್ಡೆ, ದಯಾನಂದ ಆರ್.ಶೆಟ್ಟಿ ಮೊದಲಾದವರಿದ್ದರು.
ಸಾಂತನಮಕ್ಕಿ ಗದ್ದೆಯಲ್ಲಿ ‘ಗೊಂಸರ್ ಗದ್ದೆ’ ಗ್ರಾಮೀಣ ಕ್ರೀಡಾಕೂಟವನ್ನು ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಉದ್ಘಾಟಿಸಿದರು. ಪ್ರಮುಖರಾದ ವೈ.ಪಟ್ಟಾಭಿರಾಮ್ ಭಟ್ ಮರೂರು, ಪ್ರಶಾಂತ ಹೆಗ್ಡೆ, ದಯಾನಂದ ಆರ್.ಶೆಟ್ಟಿ ಮೊದಲಾದವರಿದ್ದರು.
Published on

ಆರ್ಡಿ: ಕೃಷಿ ಬದುಕನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು. ಕೆಸರುಗದ್ದೆ ಕ್ರೀಡಾಕೂಟಗಳು ಕೇವಲ ಮನೋರಂಜನೆಗೆ ಸಿಮೀತವಾಗದೆ ಕೃಷಿಯಲ್ಲಿ ಆಸಕ್ತಿ ಮೂಡುವಂತಾಗಬೇಕು ಎಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹೇಳಿದರು.

ಅರಸಮ್ಮಕಾನು ಸಾಂತನಮಕ್ಕಿ ಗದ್ದೆಯಲ್ಲಿ ಅರಸಮ್ಮಕಾನು ನವಶಕ್ತಿ ಯುವಕ ಮಂಡಲ ಹಾಗೂ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಭಾನುವಾರ ‘ಗೊಂಸರ್ ಗದ್ದೆ-2026’ ಕ್ರೀಡಾಕೂಟ ಉದ್ಘಾಟಿಸಿ ವಾತನಾಡಿದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವಾಜಿ ಅಧ್ಯಕ್ಷ ವೈ.ಪಟ್ಟಾಭಿರಾಮ್ ಭಟ್ ಮರೂರು ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಂಬಳದ ಕೋಣಗಳನ್ನು ಓಡಿಸಲಾಯಿತು.
ಕೆರ್ಜಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಆರ್.ಶೆಟ್ಟಿ, ಮಡಾಮಕ್ಕಿ ಗ್ರಾಪಂ ವಾಜಿ ಅಧ್ಯಕ್ಷ ಉದಯ ಶೆಟ್ಟಿ, ನಾಗರಾಜ ನಕ್ಷತ್ರಿ, ಸಾಂತನಮಕ್ಕಿ ಕೆಸರುಗದ್ದೆ ವಾರಸುದಾರ ವಿಜಯ ಕುವಾರ್ ಹೆಗ್ಡೆ ಸಾಂತನಮಕ್ಕಿ, ಗುಲಾಬಿ ಶೆಟ್ಟಿ ಸಾಂತನಮಕ್ಕಿ, ಹೆಬ್ರಿ ಯುವ ಶಕ್ತಿ ಕಾರ್ಯದರ್ಶಿ ಪ್ರಜ್ಞಾ ಶೇಡಿಮನೆ ಮೊದಲಾದವರಿದ್ದರು. ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ಸ್ವಾಗತಿಸಿದರು. ರಜತ ಸಂಭ್ರಮ ಸಮಿತಿ ಅಧ್ಯಕ್ಷ ಕೀರ್ತಿ ಕುವಾರ್ ಶೆಟ್ಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net