ಉಡುಪಿಯ ಬೊಮ್ಮರಬೆಟ್ಟು ಗ್ರಾಮದಲ್ಲಿ ಕೆಸರು ಗದ್ದೆ ಓಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪ್ರಭೋದಾನಂದ ಶ್ರೀ, ವಾಸುದೇವ ಭಟ್ ನೆಕ್ಕರೆಪಲ್ಕೆ, ರಾಘವೇಂದ್ರ ನಾಯ್ಕ್ ಉದ್ದಪಲ್ಕೆ ಇತರರಿದ್ದರು.
Published on:
Copied
Follow Us
* ಸಾಣೆಕಲ್ಲಿನ ಶ್ರೀ ಭಸ್ಮೇಶ್ವರಿ ಮರಾಠಿ ಸಮಾಜ ಸಂಘ ಆಯೋಜನೆ
ಉಡುಪಿ: ಬೊಮ್ಮರಬೆಟ್ಟು ಗ್ರಾಮದಲ್ಲಿ ಶ್ರೀ ಭಸ್ಮೇಶ್ವರಿ ಮರಾಠಿ ಸಮಾಜ ಸಂಘ (ರಿ.) ಸಾಣೆಕಲ್ಲು (ಹತ್ತು ಸಮಸ್ತರ ಕೂಡುವಳಿ) ವತಿಯಿಂದ ಸೋಮಯ್ಯ ನಾಯ್ಕ್ ಅವರ ಗದ್ದೆಯಲ್ಲಿ ಭಾನುವಾರ (ಜು.5) 'ಏಕ್ ದಿಸ್ ಗಾದೆಂತ್ ಖೇಲಯ' (ಕೆಸರು ಗದ್ದೆ ಓಟ) ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ರಾಮಕೃಷ್ಣ ಆಶ್ರಮ ಬೈಲೂರು ಮಠದ ಸ್ವಾಮೀಜಿ ಪ್ರಭೋದಾನಂದ ಶ್ರೀ ಹಾಗೂ ಎನ್.ಪಿ. ಗ್ರೂಪ್ನ ಮೆನೇಜಿಂಗ್ ಡೈರೆಕ್ಟರ್ ವಾಸುದೇವ ಭಟ್ ನೆಕ್ಕರೆಪಲ್ಕೆ ಉದ್ಘಾಟಿಸಿ, ಶುಭ ಹಾರೈಸಿದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ
ಪುರಸ್ಕಾರ ವಿತರಿಸಲಾಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ, ಶುಭ ಹಾರೈಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಮೆನೇಜರ್ ಅಪ್ಪು ಜಿ. ನಾಯ್ಕ್ ಅವರು ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಕೂಡುವಳಿಯ ಗುರಿಕಾರರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಉದ್ದಪಲ್ಕೆ ಸ್ವಾಗತಿಸಿದರು. ಸದಾನಂದ್ ನಾಯ್ಕ್ ಪಂಚನಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರ ನಾಯ್ಕ್ ಪಂಚನಬೆಟ್ಟು ಮತ್ತು ಶ್ಯಾಮಲಾ ಚಂದ್ರಶೇಖರ್ ನಾಯ್ಕ್ ವಂದಿಸಿದರು.