ಆಟಿ ತಿಂಗಳ ವಿಶೇಷತೆಯಾಗಿ ಕಡಿಯಾಳಿ ಮತ್ತು ಸಗ್ರಿ ಪರಿಸರದ ಮನೆ ಮನೆಯ ತಾಯಂದಿರು ತಯಾರಿಸಿದ ಸಾಂಪ್ರದಾಯಿಕ ಅಡುಗೆಗಳಾದ ತಿಮರೆ ಚಟ್ನಿ, ಕುಡುತ ಚಟ್ನಿ, ಉಪ್ಪಡ್ ಪಚಿರ್, ತೇವುದ ಚಟ್ನಿ ಹಾಗೂ ಪತ್ರೊಡೆ ಸೇರಿದಂತೆ ಹತ್ತು ಹಲವು ಆಟಿ ಖಾದ್ಯಗಳನ್ನು ಉಣಬಡಿಸಲಾಯಿತು. ಸ್ಪರ್ಧೆಗೆ ಮುನ್ನ ಬೆಳಿಗ್ಗೆ ಕಡಿಯಾಳಿ ರಿಕ್ಷಾ ನಿಲ್ದಾಣದಿಂದ ಕಂಬಳದ ಕೋಣ, ಚಂಡೆ ವಾದ್ಯ ಹಾಗೂ ತಾಸೆ ವಾದ್ಯಗಳ ಗತ್ತಿಗೆ ಕೇಸರಿ ಶಾಲು ಮತ್ತು ಸಮವಸ್ತ್ರ ಧರಿಸಿದ ಕಾರ್ಯಕರ್ತರ ಆಕರ್ಷಕ ಮೆರವಣಿಗೆ ನಡೆಯಿತು.