ಉಡುಪಿಯಲ್ಲಿ ಕೇರಳ ಸಮಾಜಂ ಮಹಾಸಭೆ

ಉಡುಪಿಯ ಅಮೃತ್​ ಗಾರ್ಡನ್​ನಲ್ಲಿ ಆಯೋಜಿಸಿದ್ದ ಕೇರಳ ಸಮಾಜಂ ಉಡುಪಿಯ ಮಹಾಸಭೆಯನ್ನು ಅರುಣಕುಮಾರ್​ ಉದ್ಘಾಟಿಸಿದರು. ಪ್ರಶಾಂತ್​ ಕುಮಾರ್​, ರಮೇಶ್​ ಇ.ಪಿ., ನಿರ್ಮಲ್ಜಿತ್​, ಮೋಬಿ ಇದ್ದರು.
ಉಡುಪಿಯ ಅಮೃತ್​ ಗಾರ್ಡನ್​ನಲ್ಲಿ ಆಯೋಜಿಸಿದ್ದ ಕೇರಳ ಸಮಾಜಂ ಉಡುಪಿಯ ಮಹಾಸಭೆಯನ್ನು ಅರುಣಕುಮಾರ್​ ಉದ್ಘಾಟಿಸಿದರು. ಪ್ರಶಾಂತ್​ ಕುಮಾರ್​, ರಮೇಶ್​ ಇ.ಪಿ., ನಿರ್ಮಲ್ಜಿತ್​, ಮೋಬಿ ಇದ್ದರು.
Published on

* ವಾರ್ಷಿಕ ವರದಿ, ಲೆಕ್ಕಪತ್ರ ಅನುಮೋದನೆ

ಉಡುಪಿ: ಕೇರಳ ಸಮಾಜಂ (ರಿ.) ಉಡುಪಿ ಇದರ ವಾರ್ಷಿಕ ಮಹಾಸಭೆಯು ಅಂಬಾಗಿಲಿನ ಅಮೃತ್​ ಗಾರ್ಡನ್​ನಲ್ಲಿ ನಡೆಯತು. 
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಅಧ್ಯಕ್ಷ ಅರುಣಕುಮಾರ್​ ಮಾತನಾಡಿ, ಸಂಘವು ಕೈಗೊಂಡಿರುವ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ  ಸಂವು ಹಮ್ಮಿಕೊಳ್ಳಲಿರುವ ಕಾರ್ಯಕ್ರಮ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.
ಸಂಘದ ಕಾರ್ಯದರ್ಶಿ ಪ್ರಶಾಂತ್​ ಕುಮಾರ್​ 2025-26ನೇ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದರು. ಇದೇ ಸಾಲಿನ ಲೆಕ್ಕ ಪರಿಶೋಧಕರಿಂದ ಅಂಗೀಕರಿಸಲ್ಪಟ್ಟ ವಾರ್ಷಿಕ ಲೆಕ್ಕಪತ್ರಗಳನ್ನು ಖಜಾಂಚಿ ರಮೇಶ್​ ಇ.ಪಿ. ಸಭೆಯ ಮುಂದಿಟ್ಟರು.
ಇಂದಿರಾ ಸಂತೋಷ್​ ಪ್ರಾರ್ಥಿಸಿದರು. ನಿರ್ಮಲ್ಜಿತ್​ ಸ್ವಾಗತಿಸಿದರು. ಮೋಬಿ ವಂದಿಸಿದರು. ಶ್ರೀದೇವಿ ಅರುಣ್​ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಮಾಜದ ಸದಸ್ಯರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net